ಬೆಳಗಾವಿ: ಜೂಜಾಡುತ್ತಿದ್ದ ವೇಳೆ ಪೊಲೀಸ್ ದಾಳಿಗೆ ಹೆದರಿ ನದಿಗೆ ಹಾರಿ ನಾಪತ್ತೆಯಾಗಿದ್ದ ಇಬ್ಬರು ಯುವಕರು ಶವವಾಗಿ ಪತ್ತೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಹೊರವಲಯದ ಮಲಪ್ರಭಾ ನದಿಯಲ್ಲಿ ಯುವಕರ ಮೃತದೇಹ ಪತ್ತೆಯಾಗಿವೆ. ಮಂಜು ಬಂಡಿವಡ್ಡರ್(30), ಸಮೀರ್ ಬಟಕುರ್ಕಿ(22) ಮೃತರು. ಮಲಪ್ರಭಾ ನದಿ ದಡದಲ್ಲಿ ಜೂಜಾಡುತ್ತಿದ್ದ ಯುವಕರ ಗುಂಪಿನ ಮೇಲೆ ರಾಮದುರ್ಗ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಬಂಧನ ಭೀತಿಯಿಂದ ಆರು ಜನರು ಮಲಪ್ರಭಾ ನದಿಗೆ ಹಾರಿದ್ದರು. ಈ ವೇಳೆ ನಾಲ್ವರು ಈಜಿ ದಡ ಸೇರಿದ್ರೆ ಇಬ್ಬರು ಯುವಕರು ನಾಪತ್ತೆಯಾಗಿದ್ದರು.