ಕರ್ನಾಟಕ

karnataka

ETV Bharat / state

ಡಿಸಿಎಂ ಸವದಿ ಹೇಳಿಕೆ ವಿರುದ್ಧ ಸಿಡಿದೆದ್ದ ರೈತರಿಂದ ಪ್ರತಿಭಟನೆ - ಜಿಲ್ಲಾಧಿಕಾರಿ ಕಚೇರಿ

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಹೇಳಿಕೆ ಖಂಡಿಸಿ ಹಾಗೂ ಎಕರೆವಾರು ಪರಿಹಾರ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿಗೆ ರೈತರು ಮುಂದಾಗಿದ್ದಾರೆ. ನೆರೆ ಪರಿಹಾರ ಕಾರ್ಯ ಶೀಘ್ರವೇ ಆಗಬೇಕು ಎಂದು ಒತ್ತಾಯಿಸಿದರು.

ಡಿಸಿಎಂ ಸವದಿ ಹೇಳಿಕೆ ಖಂಡಿಸಿದ ರೈತರು

By

Published : Oct 5, 2019, 9:03 AM IST

ಬೆಳಗಾವಿ:ಯಾವ ಜಿಲ್ಲಾಧಿಕಾರಿ, ಅಧಿಕಾರಗಳ ವಿರುದ್ಧ ನಮ್ಮ ಪ್ರತಿಭಟನೆ ಅಲ್ಲ. ಡಿಸಿಎಂ ಲಕ್ಷ್ಮಣ ಸವದಿ ಅವರು ಸಂತ್ರಸ್ತರ ಕುರಿತು ತೋರಿದ ಬೇಜವಾಬ್ದಾರಿ ಹೇಳಿಕೆ ಖಂಡಿಸಿ ಪ್ರತಿಭಟಿಸುತ್ತಿದ್ದೇವೆ ಎಂದು ರೈತ ಮುಖಂಡ ಚನ್ನಪ್ಪ ಆಕ್ರೊಶ ವ್ಯಕ್ತಪಡಿಸಿದರು.

ಡಿಸಿಎಂ ಸವದಿ ಹೇಳಿಕೆ ಖಂಡಿಸಿದ ರೈತರು

ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ಕೈಗೊಂಡ ರೈತರು, ಕೂಡಲೇ ಎಕರೆವಾರು ಪರಿಹಾರ ಘೋಷಣೆ ಮಾಡಬೇಕು. ರೈತರ ಹೆಸರಲ್ಲಿ ಅಧಿಕಾರ ಸ್ವೀಕರಿಸಿದ ರಾಜ್ಯ ಸರ್ಕಾರ, ನೆರೆ ಸಂತ್ರಸ್ತರ ರೈತರನ್ನು ನಿರ್ಲಕ್ಷ್ಯಿಸುವುದರ ಜತೆಗೆ ವ್ಯಂಗ್ಯವಾಡಿದ್ದಾರೆ ಎಂದು ದೂರಿದರು.

ನನ್ನದು 100 ಎಕರೆ ಜಮೀನು ನೆರೆ ಹಾನಿಯಿಂದ ನಷ್ಟವಾಗಿದೆ. ನನಗೂ ಪರಿಹಾರ ಬರಬೇಕು ಎಂದು ಹೇಳಿದ ಡಿಸಿಎಂ ವಿರುದ್ಧ ರೈತರು ತೀವ್ರ ಅಸಮಾಧಾನ ಹೊಹಾಕಿದ್ದು, ನಾವೆಲ್ಲ ಸೇರಿ ನಮ್ಮ ಕೈಯಿಂದ ಹಣ ಹಾಕಿ ಸವದಿ ಅವರಿಗೆ ಪರಿಹಾರ ನೀಡಲು ಮುಂದಾಗುತ್ತೇವೆ ಎಂದು ಕುಟುಕಿದ್ದಾರೆ.

ABOUT THE AUTHOR

...view details