ಅಥಣಿ:ಸುಪ್ರಿಂ ಕೋರ್ಟ್ ಅನರ್ಹರು ಎಂದು ಹೇಳಿದ ಮೇಲೂ ತಾವು ಅರ್ಹರು ಎಂದು ವಾದಿಸುತ್ತಿರುವ ಅನರ್ಹ ಶಾಸಕರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಅರ್ಹರು ಎಂದು ವಾದಿಸುವ ಅನರ್ಹ ಶಾಸಕರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು: ರಮೇಶ್ ಕುಮಾರ್ - Former Speaker Ramesh Kumar Statement against Disqualified MLA's
ಸುಪ್ರೀಂ ಕೋರ್ಟ್ ಹೇಳಿದ ಮೇಲೂ ನಾವು ಅರ್ಹರು ಎಂದು ಹೇಳಿಕೊಳ್ಳುವವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು. ಇಲ್ಲಿ ಇಲ್ಲಾ ಅಂದ್ರೆ ಬೆಂಗಳೂರಿಗೆ ಕರೆದೊಯ್ಯಿರಿ ಎಂದು ಅನರ್ಹ ಶಾಸಕರ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಅಥಣಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲಿ ನೀವು, ನಾನು ಹೇಗೆ ನಡೆದುಕೊಳ್ಳಬೇಕು ಅನ್ನುವುದಕ್ಕೆ ಒಂದು ಸಂವಿಧಾನ ಇದೆ. ಒಂದು ಆಸ್ತಿ ವಿವಾದ ಆದ್ರೆ ಕೋರ್ಟಿಗೆ ಹೋಗ್ತೀರ. ಇಲ್ಲ ಮಚ್ಚು ಹಿಡಿದುಕೊಂಡು ತೆಗೆದುಕೊಂಡು ಹೋಗ್ತೀರ ಹೇಳಿ. ಶಿವರಾತ್ರಿ ಬಂದ್ರೆ ಹಿಂದೂಗಳು ಪೂಜೆ ಮಾಡ್ತಾರೆ. ರಂಜಾನ್ ಬಂದ್ರೆ ಇಸ್ಲಾಂ ಧರ್ಮದವರು ಉಪವಾಸ ಇರುತ್ತಾರೆ. ಎಲ್ಲವೂ ಅವರವರ ವೈಯುಕ್ತಿಕ ವಿಷಯಗಳು, ಆದ್ರೆ ರಾಷ್ಟ್ರಗೀತೆ ಕೇಳುವಾಗ ಎಲ್ಲರೂ ಎದ್ದು ನಿಲ್ಲಬೇಕು ಅನ್ನೋದು ಸಂವಿಧಾನ. ಈ ದೇಶಕ್ಕೆ ಒಂದು ಚೌಕಟ್ಟು ಇದೆ ಅದನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಹೇಳಿದ ಮೇಲೂ ನಾವು ಅರ್ಹರು ಎಂದು ಹೇಳಿಕೊಳ್ಳುವವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು. ಇಲ್ಲಿ ಆ ಆಸ್ಪತ್ರೆ ಇಲ್ಲಾ ಅಂದ್ರೆ ಬೆಂಗಳೂರಿಗೆ ಕರೆದೊಯ್ಯಬೇಕು ಎಂದು ರಮೇಶ್ಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದರು.