ಚಿಕ್ಕೋಡಿ: ಸಿಎಂ ಯಡಿಯೂರಪ್ಪ 130 ಜನರನ್ನೂ ಮಂತ್ರಿ ಮಾಡೋ ಹಾಗೆ ಕಾಣುತ್ತಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯವಾಡಿದರು.
'ಬಿಎಸ್ವೈ ಯಾವ ಊರಿಗೋದ್ರೂ ನೀವು ಮಂತ್ರಿಯಪ್ಪ ಅಂತಾ ಹೇಳ್ತಾರೆ, ಸಮಸ್ಯೆ ಆದಂತೆ ಕಾಣ್ತಿದೆ' - latest ramesh kumar news
ಸಿಎಂ ಯಡಿಯೂರಪ್ಪ 130 ಜನರನ್ನೂ ಮಂತ್ರಿ ಮಾಡೋ ಹಾಗೆ ಕಾಣುತ್ತಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯವಾಡಿದರು. ಜೊತೆಗೆ ಪಕ್ಷದ ಸ್ವಾರ್ಥ ಬಿಟ್ಟರೆ ಯಾವ ಜನ ಹಿತವೂ ಇಲ್ಲ ಎಂದರು.
ಕಾಗವಾಡ ವಿಧಾನಸಭಾ ಮತಕ್ಷೇತ್ರದ ಉಗಾರ ಪಟ್ಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಕುಮಾರ್, ಸ್ವಾರ್ಥ ಮನುಷ್ಯನಲ್ಲಿ ತುಂಬಿಕೊಂಡಾಗ ಬುದ್ಧಿ ಕೆಲಸ ಮಾಡಲ್ಲ. ನಿಮ್ಮ ಸ್ವಾರ್ಥ, ನಿಮ್ಮ ಪಕ್ಷದ ಸ್ವಾರ್ಥ ಬಿಟ್ಟರೆ ಯಾವ ಜನಹಿತವೂ ಇಲ್ಲ. ನಿಸ್ವಾರ್ಥ ಇದ್ದರೆ ಜನರೇ ನಮ್ಮ ಕೈ ಹಿಡಿಯುತ್ತಾರೆ ಎಂದರು.
ಇನ್ನು ನೆರೆ ಬರಬೇಕು ಎಂದು ಯಾರೂ ಕೋರಿಲ್ಲ. ಆ ವೇಳೆ ಅನರ್ಹರು ಎಲ್ಲಿ ಹೋಗಿದ್ದರು? ಇವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಚರ್ಚೆ ಮಾಡಲಿಕ್ಕೆ ಅಂತ ಅಸೆಂಬ್ಲಿ ಕರೆದು ಮೂರೇ ದಿನದೊಳಗೆ ಮುಗಿಸಿದರು. ಮುಖ್ಯಮಂತ್ರಿಗಳು ನೆರೆ ಸಂತ್ರಸ್ತರನ್ನು ಭೇಟಿ ಮಾಡಬೇಕಿದೆ. ನಾವು ಕೂಡಲೇ ಅಸೆಂಬ್ಲಿ ನಿಲ್ಲಿಸಿ ಅಲ್ಲಿಗೆ ಹೋಗಬೇಕಾಗಿದೆ ಎಂದಿದ್ದಕ್ಕೆ ನಾವು ಸಮ್ಮತಿಸಿದೆವು. ಆದರೆ ಇವರು ಇವರು ಹೋದದ್ದು ಮಾತ್ರ ಹೊಸಕೋಟೆಗೆ ಎಂದು ಟೀಕಿಸಿದರು.