ETV Bharat Karnataka

ಕರ್ನಾಟಕ

karnataka

ETV Bharat / state

ಇದೇನು ‘ಸಾತ್​ ಬಾರಾ ಉತಾರ’ ಅಲ್ಲ, ಮಹಾರಾಷ್ಟ್ರದ ಭೂಪಟವನ್ನೇ ಬದಲಿಸಬೇಕಾದೀತು : ರಮೇಶ ಕತ್ತಿ ಖಡಕ್ ಎಚ್ಚರಿಕೆ - ಮಹಾರಾಷ್ಟ್ರ ನಾಯಕರ ಮೇಲೆ ಮಾಜಿ ಸಂಸದ ರಮೇಶ್ ಕತ್ತಿ ಆಕ್ರೋಶ

ನಂಜುಂಡಪ್ಪ ವರದಿಯೇ ಅಂತಿಮ. ಇದೇ ರೀತಿ ಠಾಕ್ರೆ ತನ್ನ ಚಾಳಿಯನ್ನು ಮುಂದುವರಿಸಿದರೆ ಅತ್ತ ಆಂಧ್ರ ಪ್ರದೇಶ ಇತ್ತ ಮುಂಬೈ- ಕರ್ನಾಟಕ ಭಾಗಗಳನ್ನು ಕರ್ನಾಟಕ ವಶಪಡಿಸಿಕೊಂಡು ಮಹಾರಾಷ್ಟ್ರ ರಾಜ್ಯದ ಭೂಪಟವನ್ನೇ ಬದಲಾಯಿಸಬೇಕಾದಿತು ಎಂದು ಮಾಜಿ ಸಂಸದ ರಮೇಶ ಕತ್ತಿ ಎಚ್ಚರಿಕೆ ನೀಡಿದರು.

Former MP Ramesh Katti  slams Maharastra Leaders on Belagavi issue
ರಮೇಶ ಕತ್ತಿ ಖಡಕ್ ಎಚ್ಚರಿಕೆ
author img

By

Published : Feb 6, 2021, 5:10 PM IST

ಚಿಕ್ಕೋಡಿ:ನಿಪ್ಪಾಣಿ, ಬೆಳಗಾವಿ, ಕಾರವಾರ ಕೇಳುವ ಮಹಾರಾಷ್ಟ್ರದ ನಾಯಕರೇ, ಇದೇನು 7/12 (ಸಾತ್ ಬಾರಾ) ಉತಾರ ಅಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಮೇಲಿಂದ ಮೇಲೆ ಗಡಿ ಸಮಸ್ಯೆ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಂಸದ ರಮೇಶ ಕತ್ತಿ ತಿರುಗೇಟು ನೀಡಿದರು.

ರಮೇಶ ಕತ್ತಿ ಖಡಕ್ ಎಚ್ಚರಿಕೆ

ಹುಕ್ಕೇರಿ ತಾಲೂಕಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಉದ್ಧವ ಠಾಕ್ರೆ ಅವರು ಪ್ರಥಮ ಬಾರಿಗೆ ಶಾಸಕರಾಗಿ ಮುಖ್ಯಮಂತ್ರಿಗಳಾಗಿದ್ದಾರೆ. ಮೊದಲು ತಮ್ಮ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು. ಬೆಳಗಾವಿ, ಕಾರವಾರ, ನಿಪ್ಪಾಣಿ ನಮ್ಮದು ಎಂದು ಹೇಳುತ್ತಾ ಕಾಲಹರಣ ಮಾಡಿ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನ ಬಿಟ್ಟು ಗಡಿ ಪ್ರದೇಶದಲ್ಲಿ ವಾಸಿಸುವ ಮಹಾರಾಷ್ಟ್ರದ ಜನತೆಯ ಮೂಲ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದು ಅವಶ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಅನ್ನದಾತರ ಶಾಂತಿಯುತ ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿ ಅಡಗಿದೆ: ರಾಹುಲ್​ ಗಾಂಧಿ

ಆನೆ ಹೋಗುವಾಗ ಶ್ವಾನ ಬೋಗಳುವಂತೆ ಮೇಲಿಂದ ಮೇಲೆ ಗಡಿ ಬಗ್ಗೆ ಹೇಳಿಕೆ ನೀಡಿ ಎಂಇಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ನಂಜುಂಡಪ್ಪ ವರದಿಯೇ ಅಂತಿಮ. ಇದೇ ರೀತಿ ಠಾಕ್ರೆ ತನ್ನ ಚಾಳಿಯನ್ನು ಮುಂದುವರಿಸಿದರೆ ಅತ್ತ ಆಂಧ್ರಪ್ರದೇಶ ಇತ್ತ ಮುಂಬೈ - ಕರ್ನಾಟಕ ಭಾಗಗಳನ್ನು ಕರ್ನಾಟಕ ವಶಪಡಿಸಿಕೊಂಡು ಮಹಾರಾಷ್ಟ್ರ ರಾಜ್ಯದ ಭೂಪಟವನ್ನೆ ಬದಲಾಯಿಸಬೇಕಾದಿತು ಎಂದು ಎಚ್ಚರಿಕೆ ನೀಡಿದರು.

ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ ಸಹ ಉದ್ಧವ ಠಾಕ್ರೆಗೆ ಬುದ್ಧಿ ಹೇಳಬೇಕು. ಮುಂಬೈ ಕೈಗಾರಿಕೆಯ ಅತಿ ದೊಡ್ಡ ನಗರ ಇರುವುದರಿಂದ ಎಲ್ಲ ರಾಜ್ಯದ ಕಾರ್ಮಿಕರು ಉದ್ಯೋಗ ಅರಸಿ ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರಣ ಕೇಂದ್ರ ಸರ್ಕಾರ ಮುಂಬೈ ನಗರವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡುವ ಮುಖಾಂತರ ದೇಶದ ಕಿರಿಟವಾದ ಮುಂಬೈ ನಗರಕ್ಕೆ ವಿಶೇಷ ಸ್ಥಾನ ಮಾನ ನೀಡುವುದು ಅವಶ್ಯವಾಗಿದೆ ಎಂದರು.

For All Latest Updates

TAGGED:

ABOUT THE AUTHOR

...view details