ಕರ್ನಾಟಕ

karnataka

ETV Bharat / state

ಜಾರಕಿಹೊಳಿ ಕುಟುಂಬ ಇಬ್ಭಾಗವಾಗಲು ಬಿಜೆಪಿಯೇ ಕಾರಣ.. ಮಾಜಿ ಸಚಿವೆ ಉಮಾಶ್ರೀ - ಬಿಜೆಪಿ ವಿರುದ್ಧ ಉಮಾಶ್ರೀ ಆಕ್ರೋಶ

ಬೆಳಗಾವಿ ಜಿಲ್ಲೆಯ ಗೋಕಾಕ್​ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಮಾಜಿ ಸಚಿವೆ ಉಮಾಶ್ರೀ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

umashree outrage against bjp,ಬಿಜೆಪಿ ವಿರುದ್ಧ ಉಮಾಶ್ರೀ ಆಕ್ರೋಶ
ಉಮಾಶ್ರೀ

By

Published : Nov 29, 2019, 7:05 PM IST

ಬೆಳಗಾವಿ: ಜಾರಕಿಹೊಳಿ‌ ಕುಟುಂಬ ಇಬ್ಭಾಗಕ್ಕೆ ಬಿಜೆಪಿಯೇ ಕಾರಣ ಎಂದು‌ ಮಾಜಿ ಸಚಿವೆ ಉಮಾಶ್ರೀ ಪರೋಕ್ಷವಾಗಿ ‌ಆರೋಪಿಸಿದ್ದಾರೆ.

ಗೋಕಾಕ್​ ತಾಲೂಕಿನ ಮಲ್ಲಾಪುರ ಪಿಜಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಒಂದು ಕುಟುಂಬ ಇಬ್ಭಾಗವಾಗಿದೆ. ಜಾರಕಿಹೊಳಿ‌ ಕುಟುಂಬ ಇಬ್ಭಾಗಕ್ಕೆ ಬಿಜೆಪಿ ಕಾರಣ ಎಂದು ವಾಗ್ದಾಳಿ ನಡೆಸಿದರು.

ಉಮಾಶ್ರೀ, ಮಾಜಿ ಸಚಿವೆ

‌ನಾನು ಸ್ಟಾರ್ ಪ್ರಚಾರಕಿ ಅಲ್ಲ. ಕಾಂಗ್ರೆಸ್ ಪಕ್ಷ ಸಿದ್ದಾಂತ ನಂಬಿ ನಾವು ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಮಹಿಳಾ ಮತದಾರರಿಗೆ ನಮ್ಮ ಸಾಧ‌‌ನೆ ಮನವರಿಕೆ ಮಾಡಲಾಗುತ್ತಿದೆ ಎಂದರು. ಅನರ್ಹರು ಬಿಜೆಪಿ ಆಮಿಷಕ್ಕೆ ಬಲಿಯಾಗಿದ್ದಾರೆ. ಅನರ್ಹ ಶಾಸಕರ ನಡೆ ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಕುಟುಕಿದರು. ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಅವರನ್ನ ಮಾನಸಿಕ ಅಸ್ವಸ್ಥ ಎಂದಿದ್ದ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಮಾನಸಿಕ ಅಸ್ವಸ್ಥ ಎಂದು ತಿರುಗೇಟು ನೀಡಿದರು.

ABOUT THE AUTHOR

...view details