ಬೆಳಗಾವಿ : ಬಿಜೆಪಿ ಪಕ್ಷದಲ್ಲಿ ಸಚಿವ ಸಂಪುಟ ವಿಸ್ತರಣೆಯಿಂದ ಸಾಕಷ್ಟು ಅಸಮಾಧಾನ ಇದೆ. ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆಯುತ್ತದೆ ಕಾದು ನೋಡಬೇಕು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯಲ್ಲಿಯೇ ಸಾಕಷ್ಟು ಅಸಮಾಧಾನ ಇದೆ :ಸತೀಶ್ ಜಾರಕಿಹೊಳಿ - ಸತೀಶ್ ಜಾರಕಿಹೊಳಿ
ಬೆಳಗಾವಿಯಲ್ಲಿ ಬಿಜೆಪಿ ಪಕ್ಷದಲ್ಲಿ ಸಚಿವ ಸಂಪುಟ ವಿಸ್ತರಣೆಯಿಂದ ಸಾಕಷ್ಟು ಅಸಮಾಧಾನ ಇದ್ದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯುತ್ತದೆ ಎಂದು ಕಾದು ನೋಡಬೇಕು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ, ಉಮೇಶ್ ಕತ್ತಿಯವರಲ್ಲಿ ಅಸಮಾಧಾನ ಇರಬಹುದು, ಯಾಕೆಂದರೆ ಬಿಜೆಪಿಯಲ್ಲಿ ಹಿರಿಯರನ್ನು ಕಡೆಗಣಿಸಲಾಗಿದೆ. ಅವರ ಒಳಜಗಳದಿಂದ ಸರ್ಕಾರಕ್ಕೆ ತೊಂದರೆ ಖಂಡಿತ ಇದೆ ಎಂದರು.
ರಮೇಶ್ ಜಾರಕಿಹೊಳಿಯವರ ಅಸಮಾಧಾನ ಎಲ್ಲಿ ಇದ್ದರು ಇದ್ದೇ ಇರುತ್ತದೆ. ಇವತ್ತು ಕಾಂಗ್ರೆಸ್ ಜೊತೆ ಜಗಳ ಮಾಡಿದವರು ನಾಳೆ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರ ಹಾಕುತ್ತಾನೆ ಎಂದ ಅವರು, ಗೋಕಾಕ್ ತಾಲೂಕಿನಲ್ಲಿ ನಾವು ಚುನಾವಣೆ ಇಟ್ಟುಕೊಂಡು ಪ್ರವಾಹದ ಕೆಲಸ ಮಾಡಿಲ್ಲ. ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ಆದರೆ, ಅದೇ ಭಾಗದ ಶಾಸಕರಾಗಿದ್ದ ರಮೇಶ್ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಟೀಕಿಸಿದರು.