ಕರ್ನಾಟಕ

karnataka

ETV Bharat / state

ಸಹೋದರನ ಜೊತೆ ಸುತ್ತೂರು ಮಠಕ್ಕೆ ತೆರಳಿದ ಮಾಜಿ ಸಚಿವ ರಮೇಶ ಜಾರಕಿಹೊಳಿ‌ - ಸಹೋದರನ ಜೊತೆ ಸುತ್ತೂರು ಮಠಕ್ಕೆ ತೆರಳಿದ ಮಾಜಿ ಸಚಿವ ರಮೇಶ ಜಾರಕಿಹೊಳಿ‌

ರಮೇಶ್‌ ಜಾರಕಿಹೊಳಿ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮೈಸೂರಿಗೆ ತೆರಳಿದ್ದಾರೆ.

ಸುತ್ತೂರು ಮಠಕ್ಕೆ ತೆರಳಿದ ಮಾಜಿ ಸಚಿವ ರಮೇಶ ಜಾರಕಿಹೊಳಿ‌
ಸುತ್ತೂರು ಮಠಕ್ಕೆ ತೆರಳಿದ ಮಾಜಿ ಸಚಿವ ರಮೇಶ ಜಾರಕಿಹೊಳಿ‌

By

Published : Jun 25, 2021, 12:05 PM IST

Updated : Jun 25, 2021, 12:25 PM IST

ಬೆಳಗಾವಿ:ಮರಳಿ ಅಧಿಕಾರದ ಗದ್ದುಗೆ ಹಿಡಿಯಲೇಬೇಕು ಎಂದು ಪಣ ತೊಟ್ಟಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಇಂದು ವಿಶೇಷ ವಿಮಾನದ ಮೂಲಕ ಮೈಸೂರಿನ ಸುತ್ತೂರು‌ ಶಾಖಾ ಮಠಕ್ಕೆ ತೆರಳಿದರು.

ಗೋಕಾಕನಲ್ಲಿರುವ ಗೃಹ ಕಚೇರಿಯಿಂದ‌ ಹೊರಬಂದ ಜಾರಕಿಹೊಳಿ‌ ನೇರವಾಗಿ ಸಹೋದರ ಲಖನ್ ಜಾರಕಿಹೊಳಿ‌ ಮನೆಯಲ್ಲಿ ಕೆಲಹೊತ್ತು ಸಭೆ ನಡೆಸಿದರು. ಅಲ್ಲಿಂದ ಲಖನ್, ಅಳಿಯ ಅಂಬಿರಾವ್ ಪಾಟೀಲ್ ಅವರನ್ನು ಕರೆದುಕೊಂಡು ರಸ್ತೆ ಮಾರ್ಗದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನಕ್ಕೆ ಬಂದಿಳಿದರು.

ಸುತ್ತೂರು ಮಠಕ್ಕೆ ತೆರಳಿದ ಮಾಜಿ ಸಚಿವ ರಮೇಶ ಜಾರಕಿಹೊಳಿ‌

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದ ಅವರು, ವಾಪಸ್ ಬಂದು ಎಲ್ಲವನ್ನೂ ಮಾತನಾಡುತ್ತೇನೆ ಎಂದು ಹೇಳಿದರು. ಬಳಿಕ ಸಹೋದರ ಲಖನ್ ಜಾರಕಿಹೊಳಿ‌ ‌ಮಾತನಾಡಿ, ಇವತ್ತು ಶ್ರೀಗಳನ್ನು ಭೇಟಿಯಾಗುತ್ತೇವೆ. ನಾಳೆ ರಮೇಶ ಜಾರಕಿಹೊಳಿ ರಾಜೀನಾಮೆ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೋಡೋಣ. ಆ ಬಗ್ಗೆ ಹೇಳ್ತೀವಿ. ಅವರೇ ಮಾತಾಡ್ತಾರೆ ಎಂದರು.

ಇದನ್ನೂ ಓದಿ : ಫಡ್ನವಿಸ್ ಭೇಟಿ ಸಫಲ: ರಮೇಶ್ ಜಾರಕಿಹೊಳಿ‌ಗೆ ಬಿಎಸ್‌ವೈ ಬುಲಾವ್!

Last Updated : Jun 25, 2021, 12:25 PM IST

For All Latest Updates

ABOUT THE AUTHOR

...view details