ಅಥಣಿ :ಉಪ ಚುನಾವಣೆ ಕದನದಲ್ಲಿ ರಾಜಕೀಯ ಹೊಂದಾಣಿಕೆಗೆ ಮುಂದಾದ ಮಾಜಿ ಸಚಿವ ಎಂ.ಬಿ ಪಾಟೀಲ, ಇಂದು ಅಥಣಿ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಇಮ್ರಾನ್ ಪಟೇಲ್ ಮನೆಗೆ ತೆರಳಿ ಅವರನ್ನು ಓಲೈಸುವ ಪ್ರಯತ್ನ ಮಾಡಿದ್ದಾರೆ.
ಅಥಣಿ ಮತ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಇಮ್ರಾನ್ ಪಟೇಲ್ ಭರ್ಜರಿ ಪ್ರಚಾರ ಕಂಡು ಮತಗಳು ಒಡೆಯುವ ಸಾಧ್ಯತೆ ಅರಿತ ಎಂ.ಬಿ ಪಾಟೀಲ, ಇಮ್ರಾನ್ ಪಟೇಲ್ ಅವರ ಮನೆಗೆ ಭೇಟಿ ನೀಡಿದ್ದು ದಯವಿಟ್ಟು ನಮ್ಮ ಓಟುಗಳನ್ನ ಹಾಳು ಮಾಡಬೇಡಿ ಎಂದು ಮನವೊಲಿಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಎಂದು ಕೂಡ ಹೇಳುವ ಮೂಲಕ ಗಜಾನನ ಮಂಗಸೂಳಿ ಅವರ ಮತ ಹೆಚ್ಚಿಸುವ ಪ್ರಯತ್ನ ನಡೆಸುತ್ತಿದ್ದಾರೆ.