ಕರ್ನಾಟಕ

karnataka

ETV Bharat / state

ಅಧಿಕಾರ ಇರಲಿ ಅಥವಾ ಬಿಡಲಿ, ಪಕ್ಷ ಸಂಘಟನೆಯೇ ನನ್ನ ಗುರಿ : ಲಕ್ಷ್ಮಣ್​ ಸವದಿ - ಬಸವರಾಜ ಬೊಮ್ಮಾಯಿ ಸಚಿವ ಸಂಪುಟ

ರಾಷ್ಟ್ರೀಯ ನಾಯಕರು ಎಲ್ಲವನ್ನೂ ನೋಡುತ್ತಿದ್ದಾರೆ. ಪಕ್ಷದಲ್ಲಿ ಲಾಬಿ ಮಾಡಿದವರಿಗೆ ಮಂತ್ರಿಸ್ಥಾನ ಸಿಗುತ್ತದೆ ಎಂಬುದು ಸುಳ್ಳು, ಆ ಪದ್ಧತಿ ಬಿಜೆಪಿ ಪಕ್ಷದಲ್ಲಿ ಇಲ್ಲ, ಲಾಬಿ ಪದ್ಧತಿ ಕಾಂಗ್ರೆಸ್ ಪಕ್ಷದಲ್ಲಿ ಇದೆ. ಮುಂಬರುವ ದಿನದಲ್ಲಿ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ..

former dcm Laxman Savadi statment on cabinet
ಲಕ್ಷ್ಮಣ್​ ಸವದಿ

By

Published : Aug 7, 2021, 9:05 PM IST

ಅಥಣಿ : ಸೂರ್ಯ-ಚಂದ್ರರು ಯಾವ ರೀತಿ ದಿನ ಹುಟ್ಟಿ ಮುಳುಗುತ್ತಾರೋ ಅದೇ ರೀತಿಯಾಗಿ ಅಧಿಕಾರ ಎಂಬುದು ಶಾಶ್ವತವಲ್ಲ. ನನ್ನನ್ನು ಸಚಿವ ಸಂಪುಟದಿಂದ ಕೈಬಿಟ್ಟಿದಕ್ಕೆ ಯಾವುದೇ ಬೇಸರವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬಿಸಿಲಿಗೆ ಒಣಗುವ, ಮಳೆಗೆ ಚಿಗುರುವ ವ್ಯಕ್ತಿ ನಾನಲ್ಲ, ಅಧಿಕಾರ ಇರಲಿ ಅಥವಾ ಬಿಡಲಿ, ಪಕ್ಷ ಸಂಘಟನೆಯೇ ನನ್ನ ಗುರಿ. ನಿಷ್ಠೆಯಿಂದ ಪಕ್ಷವನ್ನು ಕಟ್ಟುತ್ತೇನೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಕುರಿತು ಲಕ್ಷ್ಮಣ್​ ಸವದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಕುರಿತು ಲಕ್ಷ್ಮಣ್​ ಸವದಿ ಪ್ರತಿಕ್ರಿಯೆ

ಸದ್ಯ ರಾಜಕೀಯ ಚಿತ್ರಣ ಬದಲಾಗಿದೆ : ಯಡಿಯೂರಪ್ಪನವರು ಮೂರು ವರ್ಷಗಳ ಕಾಲ ನನ್ನನ್ನ ಡಿಸಿಎಂ ಆಗಿ ಮುಂದುವರೆಸಲಾಗುವುದು ಎಂದು ಮಾತು ನೀಡಿದ್ದರು. ಆದ್ರೆ, ಸದ್ಯ ರಾಜಕೀಯ ಚಿತ್ರಣ ಬದಲಾಗಿದೆ, ಹೊಸ ಸರ್ಕಾರ ಬಂದಿದೆ. ನನ್ನ ಆತ್ಮೀಯ ಸ್ನೇಹಿತ ಬೊಮ್ಮಾಯಿ ಸಿಎಂ ಆಗಿದ್ದು, ನನಗೆ ತುಂಬಾ ಸಂತೋಷವಾಗಿದೆ. ನನ್ನನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಯಾವುದೇ ಬೇಸರ ಇಲ್ಲವೆಂದು ಮಾಜಿ ಡಿಸಿಎಂ ಪ್ರತಿಕ್ರಿಯಿಸಿದರು.

ಸಿಎಂ ಕೊರೊನಾ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಲಿ : 20 ತಿಂಗಳು ಬಸವರಾಜ ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡಲಿ. ರಾಜ್ಯದ ಹಲವಾರು ನೀರಾವರಿ ಹಾಗೂ ಪ್ರವಾಹ, ಕೊರೊನಾ ಸಂದಿಗ್ಧ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಲಿ ಎಂದು ಮುಖ್ಯಮಂತ್ರಿ ಅವರಿಗೆ ಶುಭ ಹಾರೈಸಿದರು.

ಬಿಜೆಪಿ ಪಕ್ಷದ ಪದ್ಧತಿ ಬೇರೆ : ರಾಷ್ಟ್ರೀಯ ನಾಯಕರು ಎಲ್ಲವನ್ನೂ ನೋಡುತ್ತಿದ್ದಾರೆ. ಪಕ್ಷದಲ್ಲಿ ಲಾಬಿ ಮಾಡಿದವರಿಗೆ ಮಂತ್ರಿಸ್ಥಾನ ಸಿಗುತ್ತದೆ ಎಂಬುದು ಸುಳ್ಳು, ಆ ಪದ್ಧತಿ ಬಿಜೆಪಿ ಪಕ್ಷದಲ್ಲಿ ಇಲ್ಲ, ಲಾಬಿ ಪದ್ಧತಿ ಕಾಂಗ್ರೆಸ್ ಪಕ್ಷದಲ್ಲಿ ಇದೆ. ಮುಂಬರುವ ದಿನದಲ್ಲಿ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಮಾಜಿ ಡಿಸಿಎಂ ಸವದಿ ಪ್ರತಿಕ್ರಿಯೆ ನೀಡಿದರು.

ಉಳಿದವರಿಗೆ ಸಂಪುಟದಲ್ಲಿ ಅವಕಾಶ ನೀಡಲು ನನ್ನ ಬಿಟ್ಟಿರಬಹುದು :ಪಕ್ಷದಲ್ಲಿ ಹಲವಾರು ಹಿರಿಯರು ಹಾಗೂ ಶಾಸಕರು ಇರುವುದರಿಂದ ಅವರಿಗೆ ಸಚಿವ ಸಂಪುಟದಲ್ಲಿ ಅವಕಾಶ ಸಿಗುವುದಕ್ಕೆ ನಮ್ಮನ್ನು ಕೈಬಿಟ್ಟರಬಹುದೆಂದು ನಾನು ತಿಳಿದುಕೊಂಡಿದ್ದೇನೆಂದು ಸವದಿ ಪ್ರತಿಕ್ರಿಯಿಸಿದರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ್ ಸವದಿ ಆಯ್ಕೆ : ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಆಯ್ಕೆ ಬಗ್ಗೆ ನನಗೆ ಗೊತ್ತಿಲ್ಲ. ಇದು ಮಾಧ್ಯಮಗಳ ಮಾತು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಳ್ಳೆಯ ಸಂಘಟನಾಕಾರ. ಅವರ ನೇತೃತ್ವದಲ್ಲಿ ನಾವು ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ. ವರಿಷ್ಠರು ಯಾವುದನ್ನು ಸೂಚಿಸುತ್ತಾರೆ, ಅದಕ್ಕೆ ನಾನು ಬದ್ಧ. ಸಾಮಾನ್ಯ ಕಾರ್ಯಕರ್ತನಾಗಿ ಇರುವಂತೆ ಹೇಳಿದರೂ ಅದಕ್ಕೂ ನಾನು ಸಿದ್ಧ ಎಂದರು.

ABOUT THE AUTHOR

...view details