ಚಿಕ್ಕೋಡಿ:ಸಾಲಬಾಧೆಯಿಂದ ಮನನೊಂದ ರೈತ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.
ಸಾಲಬಾಧೆ ತಾಳದೆ ಆತ್ಮಹತ್ಯೆಗೆ ಶರಣಾದ ರೈತ - ಬೆಳಗಾವಿಯಲ್ಲಿ ಸಾಲಬಾಧೆಯಿಂದ ರೈತ ಆತ್ಮಹತ್ಯೆ
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ರೈತ ರಾವಸಾಬ ಸದಾಶಿವ ಸರಡೆ (54) ಎಂಬುವವರು ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿವಿಧ ಬ್ಯಾಂಕ್ಗಳಲ್ಲಿ ₹1.52 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ.
ರೈತ ರಾವಸಾಬ ಸದಾಶಿವ ಸರಡೆ
ಗ್ರಾಮದ ರಾವಸಾಬ ಸದಾಶಿವ ಸರಡೆ (54) ಎಂಬುವವರು ಕೃಷಿ ಚಟುವಟಿಕೆಗಳಿಗಾಗಿ ಗ್ರಾಮದ ಪಿಕೆಪಿಎಸ್ನಲ್ಲಿ ₹ 32 ಸಾವಿರ ಹಾಗೂ ಜೈ ಕಿಸಾನ್ ಸೊಸೈಟಿಯಲ್ಲಿ ₹ 1 ಲಕ್ಷ ಮತ್ತು ಕೆವಿಜಿ ಬ್ಯಾಂಕ್ನಲ್ಲಿ ₹ 20 ಸಾವಿರ ಸೇರಿ ಒಟ್ಟು ₹ 1.52 ಲಕ್ಷ ರೂ. ಸಾಲ ಮಾಡಿಕೊಂಡಿದ್ದರಂತೆ. ಹಾಗಾಗಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಘಟನೆ ಸಂಬಂಧ ಅಂಕಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.