ಕರ್ನಾಟಕ

karnataka

ETV Bharat / state

ಅನರ್ಹರು ರಾಜಕೀಯವಾಗಿ ಮುಂದುವರೆಯಲು ನಾಲಾಯಕ್‌ : ಮಾಜಿ ಸಿಎಂ ಸಿದ್ದರಾಮಯ್ಯ - ಮಾಜಿ ಸಿಎಂ ಸಿದ್ದರಾಮಯ್ಯ ಗೋಕಾಕ್​ ಸುದ್ದಿ

ಗೋಕಾಕ್​ ಕಾಂಗ್ರೆಸ್ ‌ಪ್ರಚಾರ ಸಭೆಯಲ್ಲಿ ‌ ಮಾಜಿ ಸಿಎಂ ಸಿದ್ದರಾಮಯ್ಯ, ಅನರ್ಹರ ಶಾಸಕರ ವಿರುದ್ದ ತೀರ್ವ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಗೋಕಾಕ್​ ಪ್ರಚಾರ
ಮಾಜಿ ಸಿಎಂ ಸಿದ್ದರಾಮಯ್ಯ ಗೋಕಾಕ್​ ಪ್ರಚಾರ

By

Published : Dec 1, 2019, 4:40 AM IST

ಗೋಕಾಕ್​ : 17 ಜನರು ರಾಜಕೀಯವಾಗಿ ಮುಂದುವರೆಯಲು ನಾಲಾಯಕ್‌. ಉಪಚುನಾವಣೆ ಯಾರಿಗೂ ಬೇಕಿರಲಿಲ್ಲ. ನಾವೂ ಬಯಸಿರಲಿಲ್ಲ‌‌. ಉಪಚುನಾವಣೆಗೆ ಮುಖ್ಯ ‌ಕಾರಣ ರಮೇಶ ‌ಜಾರಕಿಹೊಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಗೋಕಾಕ್​ ಪ್ರಚಾರ

ಕಾಂಗ್ರೆಸ್ ‌ಪ್ರಚಾರ ಸಭೆಯಲ್ಲಿ ‌ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್ 14 , ಜೆಡಿಎಸ್ 3 ಜನ ತಮ್ಮ ಪಕ್ಷ ತೊರೆದು ಬಿಜೆಪಿಗೆ ಪಕ್ಷಾಂತರ ‌ಮಾಡಿದ್ದಾರೆ. ಇದರಿಂದ ರಾಜ್ಯದ ಖಜಾನೆಯಿಂದ ಉಪಚುನಾವಣೆಗೆ ವೆಚ್ಚ ಮಾಡಲಾಗುತ್ತಿದೆ. ರಾಜಕಾರಣ ಅಂದ್ರೆ ಹುಡುಗಾಟ, ಮಕ್ಕಳಾಟ ಅಲ್ಲ. 2018ರಲ್ಲಿ ರಮೇಶ ಜಾರಕಿಹೊಳಿ‌ ‌ಪಕ್ಷಾಂತರ ಮಾಡುವ ವೇಳೆ ನಿಮ್ಮನ್ನು ಕೇಳಿದ್ರಾ?. ಗೋಕಾಕ ಕ್ಷೇತ್ರದ ಮತದಾರರಿಗೆ ರಮೇಶ ಜಾರಕಿಹೊಳಿ‌ ‌ಮೋಸ ಮಾಡಿದ್ದಾರೆ. ರಮೇಶ ಜಾರಕಿಹೊಳಿ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ರಮೇಶ್​ ಜಾರಕೀಹೊಳಿ ವಿರುದ್ದ ವಾಗ್ದಾಳಿ ನಡೆಸಿದರು.

ಪಕ್ಷ ವಿರೋಧಿ ಚಟುವಟಿಕೆ‌ ಮಾಡುತ್ತಿದ್ದ 17 ಜನರನ್ನು ಅನರ್ಹರನ್ನಾಗಿಸಲಾಗಿದೆ. ಅನರ್ಹರು ರಾಜಕೀಯವಾಗಿ ಮುಂದುವರೆಯಲು ನಾಲಾಯಕ್‌ ಸುಪ್ರೀಂ ಕೋರ್ಟ್ ಕೂಡ ಸ್ಪೀಕರ್ ಆದೇಶ ಎತ್ತಿ ಹಿಡಿದಿದೆ. ಡಿಸೆಂಬರ್ 5ಕ್ಕೆ ಜನತಾ ನ್ಯಾಯಾಲಯ ಅನರ್ಹರಿಗೆ ತಕ್ಕ ಪಠ ಕಲಿಸಬೇಕು. ಸುಪ್ರೀಂ ‌ಕೋರ್ಟ್ ಅನರ್ಹರಿಗೆ ನಾಲಾಯಕ್ ಎಂದು‌ ನಿಮ್ಮ ಬಳಿ ಕಳಿಸಿದೆ. ರಮೇಶ್​ ಜಾರಕಿಹೊಳಿ‌ ಪರ್ಮೆಂಟ್ ಆಗಿ ನಾಲಾಯಕ್ ಎಂದು ತೀರ್ಪು ಕೊಡಬೇಕು ಎಂದು ಕರೆ ನೀಡಿದರು.

ABOUT THE AUTHOR

...view details