ಕರ್ನಾಟಕ

karnataka

ETV Bharat / state

ಈ ಸರ್ಕಾರದಲ್ಲಿ ಉ.ಕ ಭಾಗದ ಸಮಸ್ಯೆಗಳ ಚರ್ಚೆಗೆ ಅವಕಾಶ ಸಿಗಲಿಲ್ಲ: ಸಿದ್ದರಾಮಯ್ಯ ಆಕ್ರೋಶ - ಅಮಿತ್ ಶಾ

ಸುವರ್ಣಸೌಧದಲ್ಲಿ ಉ.ಕ ಭಾಗದ ಚರ್ಚೆಗೆ ಅವಕಾಶ ಸಿಗಲಿಲ್ಲ- ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಬೇಸರ- ಅಮಿತ್​ ಶಾ ಬರ್ತಾರೆ ಅಂತಾ ಅಧಿವೇಶನ ನಿಲ್ಲಿಸಿದ್ರು ಎಂದು ಆರೋಪ

siddaramaiah
ಸಿದ್ದರಾಮಯ್ಯ

By

Published : Dec 29, 2022, 1:46 PM IST

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ

ಬೆಳಗಾವಿ: ಬೆಳಗಾವಿ ಸುವರ್ಣಸೌಧದಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಅವಕಾಶವಿಲ್ಲ. ಕಬ್ಬುಬೆಳೆಗಾರರು, ಭತ್ತ ಬೆಳೆಗಾರರ ಬಗ್ಗೆ ಚರ್ಚೆಯಾಗಬೇಕೆಂದು ಸ್ಪೀಕರ್ ಹೇಳಿದರು. ಆದರೂ ಸರ್ಕಾರ ಇದಕ್ಕೆ ಅವಕಾಶ ಮಾಡಿ ಕೊಡಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಬೆಳಗಾವಿ ಸುವರ್ಣಸೌಧದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು, ನಾವು ಅಖಂಡ ಕರ್ನಾಟಕದ ಬಗ್ಗೆ ಚರ್ಚೆ ಮಾಡಿದ್ದೇವೆ. ಉತ್ತರ ಕರ್ನಾಟಕ ಬಗ್ಗೆ ಬಹಳ‌ ಮಾತನಾಡಬಹುದಿತ್ತು. ರಾಜ್ಯ ಸರ್ಕಾರ ಈ ಬಗ್ಗೆ ಆಸಕ್ತಿ ತೆಗೆದುಕೊಳ್ಳಬೇಕಾಗಿತ್ತು. ಆದ್ರೆ ಅವರು ಆಸಕ್ತಿ ತೋರಲಿಲ್ಲ ಎಂದರು.

ಸ್ಪೀಕರ್​ ಎರಡು ದಿನ ಚರ್ಚೆಗೆ ಅವಕಾಶ ನೀಡಿದ್ದರು. ಆದ್ರೆ ಯಾವುದೇ ಎಂಎಲ್​ಎಗಳು ಆಸಕ್ತಿ ತೋರಲಿಲ್ಲ. ನಾವು ಉತ್ತರ ಕರ್ನಾಟಕ ಆಗಲಿ, ದಕ್ಷಿಣ ಕರ್ನಾಟಕವಾಗಲಿ ಬೇರೆಯಾಗಿ ಮಾತನಾಡುವುದಿಲ್ಲ. ನಾವು ಸಮಗ್ರ ಕರ್ನಾಟಕದ ಬಗ್ಗೆ ಮಾತನಾಡಿದ್ದೇವೆ ಎಂದರು. ಯಾವ ಭಾಗದ ರೈತರೇ ಆಗಲಿ, ಅವರು ರೈತರೆ. ಅದಕ್ಕೋಸ್ಕರ ನಿನ್ನೆ ಅದರ ಬಗ್ಗೆ ಚರ್ಚೆ ಮಾಡಿದ್ದು. ರೈತರಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಲಿ ಸರ್ಕಾರ ಎಂದು ಸವಾಲು ಹಾಕಿದರು.

ಇನ್ನೊಂದು ವಾರ ಸದನ ಮಾಡಬಹುದಾಗಿತ್ತು. ಅಮಿತ್ ಶಾ ಬರುತ್ತಾರೆ ಎಂದು ಬಿಜೆಪಿ ನಾಯಕರು ಹೋಗುತ್ತಿದ್ದಾರೆ. ಅವರು ಬಂದ್ರು ಅಂದ್ರೆ ಸದನ ಮಾಡೋಕೇನು?.. ನಾನು ವಿಜಯಪುರ ಸಮಾವೇಶಕ್ಕೆ ಹೋಗ್ತೇನೋ, ಬಿಡ್ತೇನೋ.. ಇವರು ಅಮಿತ್ ಶಾ ಬರ್ತಾರೆ ಅಂತ ಅಧಿವೇಶನ ನಿಲ್ಲಿಸಿದ್ರೆ ಹೇಗೆ? ಎಂದು ಬಿಜೆಪಿ ಸರ್ಕಾರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಡುಗಿದರು.

ಇದನ್ನೂ ಓದಿ:ಗಡಿ ಕ್ಯಾತೆ ಬಳಿಕ ಜಲ ತಂಟೆ: ಆಲಮಟ್ಟಿ ಜಲಾಶಯದ ಎತ್ತರಕ್ಕೆ ಮಹಾರಾಷ್ಟ್ರ ತಗಾದೆ

ABOUT THE AUTHOR

...view details