ಅಥಣಿ:ತಾಲೂಕಿನ 65 ಬಡ ಕುಟುಂಬಗಳಿಗೆ ಮಾದಿಗ ಮೀಸಲಾತಿ ಸಮಿತಿಯಿಂದ ಆಹಾರದ ಕಿಟ್ ವಿತರಣೆ ಮಾಡಲಾಯಿತು.
ಮಾದಿಗ ಸಮುದಾಯದಿಂದ ಮಾನವೀಯ ಕಾರ್ಯ: ಬಡ ಕುಟುಂಬಗಳಿಗೆ ಆಹಾರ ಕಿಟ್ - Food kit for poor people
ಭಾರತದಲ್ಲಿ ಲಾಕ್ಡೌನ್ ಮುಂದುವರೆದು ಇಂದಿಗೆ 17ನೇ ದಿನವಾಗಿದ್ದು ಅಥಣಿಯ ಹಲವು ಗ್ರಾಮಗಳಿಗೆ ಮಾದಿಗ ಮೀಸಲಾತಿ ಸಮಿತಿಯಿಂದ ಆಹಾರದ ಕಿಟ್ ವಿತರಣೆ ಮಾಡಲಾಯಿತು.
ಕಿಟ್ ವಿತರಣೆ
ಮಾದಿಗ ಮೀಸಲಾತಿ ಹೊರಾಟ ಸಮಿತಿಯ ಜಿಲ್ಲಾಧ್ಯಕ್ಷ ರಾಜೇಂದ್ರ ಐಹೊಳೆ ಮಾತನಾಡಿ, ಸಮುದಾಯದಲ್ಲಿ ಕೊರೊನಾ ಜಾಗೃತಿ ಮೂಡಿಸುವುದರ ಜೊತೆಗೆ ಮಾರಕ ವೈರಾಣುವಿನ ವಿರುದ್ಧ ಹೋರಾಟಕ್ಕೆ ಸಮುದಾಯವನ್ನು ಬಲಪಡಿಸಲಾಗುತ್ತಿದೆ. ಒಂದು ಸಾವಿರ ಜನರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆಯುವ ಪುಟ್ಟ ಮತ್ತು ದಿಟ್ಟ ಹೆಜ್ಜೆ ಎಂದರು.