ಬೆಳಗಾವಿ: ಕೃಷ್ಣಾ ನದಿ ಪ್ರವಾಹ ಎದುರಾಗಿ 70 ದಿನಗಳು ಕಳೆದರೂ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳನ್ನು ನೀಡಿರಲಿಲ್ಲ. ಈ ಕುರಿತು ವರದಿ ಮಾಡಲು ತೆರಳಿದಾಗ, ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಜಿಲ್ಲಾಡಳಿತ ಎಚ್ಚೆತ್ತುಕೊಂಡು ತುರ್ತು ಆಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ವಿತರಿಸಿದರು.
ವರದಿ ಮಾಡಲು ತೆರಳದಿ ಈಟಿವಿ ಭಾರತ, ಎಚ್ಚೆತ್ತ ಅಧಿಕಾರಿಗಳಿಂದ ಆಹಾರದ ಕಿಟ್ ವಿತರಣೆ - Flood in Karnataka
ಕೃಷ್ಣಾ ನದಿ ಪ್ರವಾಹ ಎದುರಾಗಿ 70 ದಿನಗಳು ಕಳೆದರೂ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳನ್ನು ನೀಡಿರಲಿಲ್ಲ. ಈ ಕುರಿತು ವರದಿ ಮಾಡಲು ತೆರಳಿದಾಗ, ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಜಿಲ್ಲಾಡಳಿತ ಎಚ್ಚೆತ್ತುಕೊಂಡು ತುರ್ತು ಆಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ವಿತರಿಸಿದರು.
ಆಹಾರದ ಕಿಟ್ ವಿತರಣೆ
ಅಕ್ಕಿ, ಬೇಳೆ, ಸಕ್ಕರೆ, ಟೀ ಪುಡಿ ಸೇರಿದಂತೆ ವಿವಿಧ ಆಹಾರ ಸಾಮಗ್ರಿಗಳು ಕಿಟ್ನಲ್ಲಿವೆ. ಆದರೆ ಸೀಮೆಎಣ್ಣೆ ನೀಡದಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಶಿರಹಟ್ಟಿ ಗ್ರಾಮ ಲೆಕ್ಕಾಧಿಕಾರಿ, ತಾಲೂಕಾಡಳಿತ ನಮ್ಮ ಗ್ರಾಮಕ್ಕೆ ಸೀಮೆ ಎಣ್ಣೆ ನೀಡಿಲ್ಲ. ಬಂದ ಮೇಲೆ ನೀಡುತ್ತೇವೆ ಎಂದು ತಿಳಿಸಿದರು.