ಚಿಕ್ಕೋಡಿ: ಕೋವಿಡ್-19 ತಡೆಗೆ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಎಲ್ಲರೂ ಪಾಲಿಸುವಂತೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಮನವಿ ಮಾಡಿದ್ದಾರೆ.
ಸರ್ಕಾರದ ಸುತ್ತೋಲೆ ಪಾಲಿಸಲು ಹಿರೇಮಠ ಶ್ರೀಗಳ ಮನವಿ.. - ಕೊರೊನಾ ಸೋಂಕಿನ ಲಕ್ಷಣ
ಕೊರೊನಾ ವಿರುದ್ಧದ ಹೋರಾಟಕ್ಕೆ ಎಲ್ಲರೂ ಮುಂಚೂಣಿಯಲ್ಲಿ ನಿಲ್ಲೋಣ ಅಂತಾ ಭಕ್ತರು ಮತ್ತು ರಾಜ್ಯದ ಜನರಲ್ಲಿ ಶ್ರೀಗಳು ಮನವಿ ಮಾಡಿದ್ದಾರೆ.
ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
ಸರ್ಕಾರದ ಆದೇಶದ ಪ್ರಕಾರ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಹಾಗಾಗಿ ಎಲ್ಲರೂ ಬದ್ಧರಾಗಿ ಕೊರೊನಾ ಹಿಮ್ಮೆಟ್ಟಿಸಬೇಕು. ಪ್ರತಿಯೊಬ್ಬ ನಾಗರಿಕನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಎಲ್ಲರೂ ಮುಂಚೂಣಿಯಲ್ಲಿ ನಿಲ್ಲೋಣ ಅಂತಾ ಭಕ್ತರು ಮತ್ತು ರಾಜ್ಯದ ಜನರಲ್ಲಿ ಶ್ರೀಗಳು ಮನವಿ ಮಾಡಿದ್ದಾರೆ.