ಕರ್ನಾಟಕ

karnataka

ETV Bharat / state

ಚಿಕ್ಕೋಡಿ ಉಪ ವಿಭಾಗ ತಾಲೂಕುಗಳಲ್ಲಿ ಪ್ರವಾಹ: ರಕ್ಷಣಾ ಕಾರ್ಯ ಚುರುಕು - ಪ್ರವಾಹ ಪೀಡಿತರ ರಕ್ಷಣೆ

ಚಿಕ್ಕೋಡಿ, ಅಥಣಿ, ಕಾಗವಾಡ ತಾಲೂಕುಗಳಲ್ಲಿ ಬೀಡು ಬಿಟ್ಟಿರುವ ಅಧಿಕಾರಿಗಳು ಪ್ರವಾಹಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ರಕ್ಷಣಾ ಕಾರ್ಯಚರಣೆ

By

Published : Aug 5, 2019, 9:55 AM IST

ಚಿಕ್ಕೋಡಿ:ಕಳೆದ ಮೂರ್ನಾಲ್ಕು ದಿನಗಳಿಂದ ಚಿಕ್ಕೋಡಿ ಉಪ ವಿಭಾಗದ ನದಿ ತೀರದ ಗ್ರಾಮಗಳು ಪ್ರವಾಹದಿಂದ ತತ್ತರಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ರಕ್ಷಣಾ ಕಾರ್ಯಾಚರಣೆ ಚುರುಕು

ಈಗಾಗಲೇ ಚಿಕ್ಕೋಡಿ, ಅಥಣಿ, ಕಾಗವಾಡ ತಾಲೂಕುಗಳಲ್ಲಿ ಬೀಡು ಬಿಟ್ಟಿರುವ ಅಧಿಕಾರಿಗಳು ಪ್ರವಾಹಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ 131 ಕುಟುಂಬಗಳ ರಕ್ಷಣೆ:

  • ಸಪ್ತಸಾಗರ ಬನ - 40
  • ನಾಗನುರ ಪಿಕೆ - 11
  • ದೊಡವಾಡ - 50
  • ಹುಲಗಬಾಳಿ - 30 ಕುಟುಂಬಗಳ ರಕ್ಷಣೆ

ಚಿಕ್ಕೋಡಿ ತಾಲೂಕಿನ ಒಟ್ಟು 331 ಕುಟುಂಬಗಳ ರಕ್ಷಣೆ:

  • ಇಂಗಳಿ - 188
  • ಯಡೂರವಾಡಿ - 49
  • ಕಲ್ಲೋಳ ಗ್ರಾಮ - 42 ಕುಟುಂಬಗಳ ರಕ್ಷಣೆ

ಕಾಗವಾಡ ತಾಲೂಕಿನ 33 ಕುಟುಂಬಗಳ ರಕ್ಷಣೆ:

  • ಬಣಜವಾಡ - 28
  • ಕಾತ್ರಾಳ - 05

ಪ್ರವಾಹದಿಂದ ಬೆಳೆ ಕೂಡಾ ಹಾನಿಯಾಗುವ ಸಾಧ್ಯತೆ ಇದ್ದು, ಈಗಾಗಲೇ ಸಾವಿರಾರು ಎಕರೆ ಬೆಳೆ ನಾಶ ಆಗಿದೆ. ಬೆಳೆದ ಬೆಳೆ ಕೈಗೆ ಸಿಗದೆ ರೈತ ಕಂಗಾಲಾಗಿದ್ದಾನೆ. ಹಗಲು ರಾತ್ರಿ ಎನ್ನದೆ ರಾಜ್ಯ ವಿಪತ್ತು ನಿಗ್ರಹ ಪಡೆ, ಅರೆಸೇನಾ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ABOUT THE AUTHOR

...view details