ಕರ್ನಾಟಕ

karnataka

ETV Bharat / state

ವಾಹನದಲ್ಲಿ ಕುಳಿತೇ ಪ್ರವಾಹ ಪರಿಸ್ಥಿತಿ ವೀಕ್ಷಣೆ: ಸಂಸದ ಅನಂತಕುಮಾರ ಹೆಗಡೆ ವಿರುದ್ಧ ರೈತರ ಅಸಮಾಧಾನ - ಸಂಸದ ಅನಂತಕುಮಾರ ಹೆಗಡೆ ವಿರುದ್ಧ ರೈತರ ಅಸಮಾಧಾನ

ವಾಹನದಲ್ಲೇ ಕುಳಿತು ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಮುಂದಾದ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದರು.

Ananth Kumar Hegde
ಸಂಸದ ಅನಂತಕುಮಾರ ಹೆಗಡೆ

By

Published : Aug 18, 2020, 5:11 PM IST

ಬೆಳಗಾವಿ: ಕಾರಲ್ಲೇ ಕುಳಿತು ಪ್ರವಾಹ ಪರಿಸ್ಥಿತಿ ವೀಕ್ಷಿಸುತ್ತಿದ್ದ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿ, ಘೇರಾವ್ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

ವಾಹನದಲ್ಲಿ ಕುಳಿತೇ ಪ್ರವಾಹ ವೀಕ್ಷಣೆ: ಸಂಸದ ಅನಂತಕುಮಾರ ಹೆಗಡೆ ವಿರುದ್ಧ ರೈತರ ಅಸಮಾಧಾನ

ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಗ್ರಾಮದ ಬಳಿ ಮಲಪ್ರಭಾ ನದಿ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಸಂಸದರಿಂದು ಆಗಮಿಸಿದ್ದರು. ಆದರೆ ಕೆಳಗಿಳಿಯದೇ ವಾಹನದಲ್ಲೇ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಮುಂದಾದರು. ಇದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಯಿತು. ವಾಹನದಲ್ಲೇ ಕುಳಿತು ನದಿ ನೋಡಬೇಡಿ. ಕೆಳಗಿಳಿದು ಬರುವಂತೆ ರೈತ ಹೋರಾಟಗಾರರು ಆಗ್ರಹಿಸಿದರು. ವಾಹನದ ಮುಂದೆ ಅಡ್ಡ ನಿಂತು ಸಂಸದರ ಕಾರ್ಯವೈಖರಿ ವಿರುದ್ಧ ರೈತರು ಪ್ರತಿಭಟಿಸಿದರು. ರೈತರ ಸಮಸ್ಯೆ ಕೇಳದೇ ಸಂಸದರು ಸ್ಥಳದಿಂದ ಕಾಲ್ಕಿತ್ತರು.

For All Latest Updates

ABOUT THE AUTHOR

...view details