ಕರ್ನಾಟಕ

karnataka

ETV Bharat / state

ಬೀದಿಗೆ ಬಿದ್ದ ಜನರ ಬದುಕು: ಕೇಳೋರಿಲ್ಲ ಇವರ ಗೋಳು - Krishna River Flood

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದ ಜನರು ಕೃಷ್ಣಾ ನದಿ ಪ್ರವಾಹ ಬಂದಾಗಿನಿಂದ ಇಲ್ಲಿಯವರೆಗೆ ಬೀದಿಯಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದಾರೆ.

ಬೀದಿಗೆ ಬಿದ್ದ ಜನರ ಬದುಕು

By

Published : Aug 25, 2019, 7:32 PM IST

ಚಿಕ್ಕೋಡಿ:ಕೃಷ್ಣಾ ನದಿ ಪ್ರವಾಹ ಬಂದಾಗಿನಿಂದ ಇಲ್ಲಿಯವರೆಗೆ ಬೀದಿಯಲ್ಲಿ ತಮ್ಮ ಜೀವನ ಸಾಗಿಸುತ್ತಿರುವ ನಿರಾಶ್ರಿತರ ಬಗ್ಗೆ ರಾಜಕಾರಣಿಗಳು, ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ.

ಜಿಲ್ಲೆಯ ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದ ಜನರಿಗೆ ಬೀದಿಯೇ ಮನೆಯಾಗಿದೆ. ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಕಾತ್ರಾಳ ಗ್ರಾಮಸ್ಥರು, ಈಗ ವಿಧಿ ಇಲ್ಲದೆ ರಸ್ತೆಯ ಮಧ್ಯೆಯೇ ಟೆಂಟ್ ಹಾಕಿ ವಾಸ ಮಾಡುತ್ತಿದ್ದಾರೆ.

ಬೀದಿಗೆ ಬಿದ್ದ ಜನರ ಬದುಕು

ಈಗಾಗಲೇ ಗ್ರಾಮಕ್ಕೆ ಸರ್ವೆ ಅಧಿಕಾರಿಗಳು ಬಂದು ಸರ್ವೆ ನಡೆಸಿದ್ದಾರೆ. ಆದರೆ ಅದರ ಪ್ರಯೋಜನ ಇನ್ನೂ ಲಭ್ಯವಾಗಿಲ್ಲ. ಮನೆಗಳೆಲ್ಲ ಬಿದ್ದು ಹೋಗಿದ್ದು, ಪರಿಹಾರ ಕೇಂದ್ರಗಳನ್ನು ಸಹ ಬಂದ್​​ ಮಾಡಲಾಗಿದೆ. ಸದ್ಯ, ಸರ್ಕಾರ ಈ ಗ್ರಾಮದ ಜನರನ್ನು ಆದಷ್ಟು ಬೇಗ ಬೇರೆ ಕಡೆ ಶಿಫ್ಟ್​ ಮಾಡಿ ಎಂದು ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ABOUT THE AUTHOR

...view details