ಬೆಳಗಾವಿ: ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ರಾಮದುರ್ಗ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನೆರೆ ಪರಿಹಾರ ವಿಳಂಬ: ಮಲಪ್ರಭ ನದಿ ತೀರದ ನೆರೆ ಸಂತ್ರಸ್ತರಿಂದ ಬೃಹತ್ ಪ್ರತಿಭಟನೆ - ಬೆಳಗಾವಿಯಲ್ಲಿ ಸರ್ಕಾರದ ನೆರೆ ಪರಿಹಾರ ವಿಳಂಬ
ರಾಮದುರ್ಗ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೆರೆ ಪರಿಹಾರ ವಿಳಂಬ ಹಾಗೂ ತಾರತಮ್ಯ ಖಂಡಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಸಾವಿರಾರು ನೆರೆ ಸಂತ್ರಸ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಸಾವಿರಾರು ನೆರೆ ಸಂತ್ರಸ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಮಲ್ಲಪ್ರಭ ನದಿ ತೀರ ಗ್ರಾಮದ ನೆರೆ ಸಂತ್ರಸ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೆರೆ ಹಾವಳಿ ಸಂಭವಿಸಿ ಸುಮಾರು 7 ತಿಂಗಳು ಕಳೆದಿದೆ. ಇನ್ನೂ ಮನೆ ಕಳೆದುಕೊಂಡವರಿಗೆ, ಆಸ್ತಿ ನಷ್ಟ ಹೊಂದಿದವರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಅರ್ಹ ಫಲಾನುಭವಿಗಳಿಗೆ ಪರಿಹಾರ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಬಿದ್ದ ಮನೆಗಳಿಗೆ ಸರಿಯಾಗಿ ಜಿಪಿಎಸ್ ಮಾಡಿಲ್ಲ. ಇದರಿಂದ ಪರಿಹಾರದಲ್ಲಿ ಉಂಟಾದ ತಾರತಮ್ಯ ಸರಿಪಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.