ಕರ್ನಾಟಕ

karnataka

ETV Bharat / state

ಜಲಾವೃತಗೊಂಡಿದ್ದ ಸೇತುವೆಗಳು ಸಂಚಾರಕ್ಕೆ ಮುಕ್ತ - Belagavi District news

ವಿಪರೀತ ಮಳೆ, ಪ್ರವಾಹದಿಂದ ಜಲಾವೃತ್ತಗೊಂಡಿದ್ದ, ಮಹಾರಾಷ್ಟ್ರ ಮತ್ತು ಕರ್ನಾಟಕದ ಸಂಪರ್ಕ ಸೇತುವೆಯಲ್ಲಿ ನೀರಿನ ಪ್ರಮಾಣ ತಗ್ಗಿದ್ದು, ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.

ಜಲಾವೃತ್ತಗೊಂಡಿದ್ದ ಸೇತುವೆಗಳು ಸಂಚಾರಕ್ಕೆ ಮುಕ್ತ

By

Published : Aug 19, 2019, 12:18 PM IST

ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ತಗ್ಗಿದ ಹಿನ್ನೆಲೆ ಕೃಷ್ಣಾ ಪ್ರವಾಹ ಸಂಪೂರ್ಣ ಇಳಿಕೆಯಾಗಿದೆ. ಹೀಗಾಗಿ ಜನ ಜೀವನ ಸಹಜ ಸ್ಥಿತಿಯತ್ತ ಮರಳಿದ್ದು, ಮತ್ತೆ ರಸ್ತೆ ಸಂಚಾರ ಆರಂಭಗೊಂಡಿದೆ.

ಜಲಾವೃತ್ತಗೊಂಡಿದ್ದ ಸೇತುವೆಗಳು ಸಂಚಾರಕ್ಕೆ ಮುಕ್ತ

ಹೌದು, ಚಿಕ್ಕೋಡಿ ತಾಲೂಕಿನ ಸದಲಗಾ - ಬೋರಗಾಂವ, ಯಕ್ಸಂಬಾ - ದಾನವಾಡ ಸೇತುವೆ ಹಾಗೂ ರಾಯಬಾಗ ತಾಲೂಕಿನ ರಾಯಬಾಗ-ಚಿಂಚಲಿ ಹಾಗೂ ಕುಡಚಿ-ಮಿರಜ್​​​ ರಾಜ್ಯ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ಮತ್ತು ಚಿಕ್ಕೋಡಿ ತಾಲೂಕಿನ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ಹಾಗೆ ಕಳೆದ 15 ದಿನಗಳಿಂದ ಜಲಾವೃತ್ತಗೊಂಡಿದ್ದ, ಮಹಾರಾಷ್ಟ್ರ ಮತ್ತು ಕರ್ನಾಟಕದ ಸಂಪರ್ಕ ಸೇತುವೆಗಳು ಕೂಡಾ ಸಂಚಾರಕ್ಕೆ ಮುಕ್ತವಾಗಿವೆ.

ABOUT THE AUTHOR

...view details