ಬೆಳಗಾವಿ/ಅಥಣಿ: ತಾಲೂಕಿನ ಯಲ್ಲಮ್ಮನವಾಡಿ ಸುಕ್ಷೇತ್ರ ಮತ್ತೆ ಜಲಾವೃತವಾಗಿದೆ. ಅಥಣಿ ಪೂರ್ವ ಭಾಗದಲ್ಲಿ ಸುರಿದ ಭಾರಿ ಮಳೆಗೆ ಹಿರೇಹಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಯಲ್ಲಮ್ಮ ದೇವಸ್ಥಾನ ಮೂರನೇ ಬಾರಿಗೆ ಮುಳುಗಿದೆ.
ಅಥಣಿ ಭಾಗದಲ್ಲಿ ಮತ್ತೆ ವರುಣನ ಆರ್ಭಟ: ಯಲ್ಲಮ್ಮವಾಡಿಯಲ್ಲಿ ದೇವಸ್ಥಾನ ಜಲಾವೃತ - ಬೆಳಗಾವಿ ಇತ್ತೀಚಿನ ಮಳೆ ಸುದ್ದು
ಬೆಳಗಾವಿ ಜಿಲ್ಲೆಯ ಅಥಣಿ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ಯಲ್ಲಮ್ಮವಾಡಿಯ ಯಲ್ಲಮ್ಮ ದೇವಾಸ್ಥಾನ ಮತ್ತೊಮ್ಮೆ ಜಲಾವೃತವಾಗಿದೆ.
ತಾಲೂಕಿನ ಬಾಡಗಿ, ಕೊಕಟನೂರ, ಅರಟಾಳ, ಕೊಹಳ್ಳಿ, ಐಗಳಿ ಯಕಂಚಿ, ಅಡಹಳ್ಳಿ ಭಾಗದಲ್ಲಿ ಸುರಿದ ಮಳೆ ನೀರು ಹಿರೇಹಳ್ಳದ ಮೂಲಕ ಹರಿಯುವ ಪರಿಣಾಮ ದೇವಾಲಯ ಜಲಾವೃತಗೊಂಡಿದೆ. ದೇವಾಸ್ಥಾನದ ಅಕ್ಕಪಕ್ಕದಲ್ಲಿದ್ದ ಅಂಗಡಿಗಳು ನೀರಿನ ರಭಸಕ್ಕೆ ಕೊಚ್ಚಿಹೋಗುತ್ತಿವೆ. ಕೆಲವು ಸ್ಥಳೀಯರಿಂದ ರಕ್ಷಿಸಲ್ಪಟ್ಟರೆ, ಇನ್ನೂ ಕೆಲವು ಹಳ್ಳದ ಪಾಲಾಗಿದೆ. ಪದೇ ಪದೇ ದೇವಾಲಯ ಜಲಾವೃತವಾಗುತ್ತಿರುವುದು ಜನರ ಬೇಸರಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಹಾಗೂ ರಾಜ್ಯದ ಜನರಿಗೆ ದರ್ಶನ ಭಾಗ್ಯ ಇಲ್ಲದೆ ಪರದಾಡುವಂತಾಗಿದೆ. ಹಠಾತ್ತನೆ ನೀರು ಬಂದಿದ್ದರಿಂದ ಕೇಲಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಪ್ರವಾಹದಿಂದ ಯಾವುದೇ ಆತಂಕವಿಲ್ಲ ಯತಾ ಪ್ರಕಾರ ಗಡಿನಾಡು ಶಕ್ತಿ ದೇವತಿಗೆ ಪೂಜೆ ಕೈಂಕರ್ಯಗಳು ನಡೆಯಲಿವೆ ಎಂದು ಸುಕ್ಷೇತ್ರದ ಅರ್ಚಕ ಶಶಿಧರ್ ಪೂಜಾರಿ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.