ಬೆಳಗಾವಿ:ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಬಿಡುಟ್ಟಿರುವ ಕಾರಣ ಜಿಲ್ಲೆಯ ಗೋಕಾಕ್ ತಾಲೂಕಿನ ಅಡಿಬಟ್ಟಿ ಗ್ರಾಮ ನಡುಗಡ್ಡೆಯಾಗಿ ಮಾರ್ಪಟ್ಟಿದೆ. ಹೀಗಾಗಿ ಅಡಿಬಟ್ಟಿ ಗ್ರಾಮದ ಮನೆಯೊಂದರ ಮೇಲೆ 9 ಜನರು ಸಿಲುಕಿಕೊಂಡಿದ್ದಾರೆ.
ಅಡಿಬಟ್ಟಿ ಗ್ರಾಮ ಮುಳುಗಡೆ: ಮನೆ ಮೇಲೆ ಕುಳಿತು ಪ್ರಾಣ ಉಳಿಸಿಕೊಂಡ ಯುವಕರು! - Belagavi Adibatti village Drowning News
ಅಡಿಬಟ್ಟಿ ಗ್ರಾಮದಲ್ಲಿ 9 ಜನರು ಉಳಿದಿದ್ದರು. ಇವರೆಲ್ಲರೂ ಪ್ರವಾಹಕ್ಕೆ ಸಿಲುಕಿದ್ದು, ಕಟ್ಟಡದ ಮೇಲೆ ನಿಂತು ಕೈ ಮಾಡುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೆಳಗಾವಿ ಜಿಲ್ಲೆಯ ಅಡಿಬಟ್ಟಿ ಗ್ರಾಮ ಮುಳುಗಡೆ
ಪ್ರತೀ ಬಾರಿ ಪ್ರವಾಹ ಬಂದಾಗ ಅಡಿಗಟ್ಟಿ ನಡುಗಡ್ಡೆಯಾಗಿ ಮಾರ್ಪಡುತ್ತದೆ. ಜನರು ಸುರಕ್ಷಿತ ಸ್ಥಳಕ್ಕೆ ತೆರಳಿದ ವೇಳೆ ಗ್ರಾಮಕ್ಕೆ ಕಳ್ಳರು ನುಗ್ಗುವ ಭೀತಿ ಹಿನ್ನೆಲೆಯಲ್ಲಿ ಅಡಿಬಟ್ಟಿ ಗ್ರಾಮದಲ್ಲಿಯೇ 9 ಜನರು ಉಳಿದಿದ್ದರು. ಇವರೆಲ್ಲರೂ ಪ್ರವಾಹಕ್ಕೆ ಸಿಲುಕಿದ್ದು, ಮನೆಯ ತಾರಸಿ ಮೇಲೆ ನಿಂತು ಕೈ ಮಾಡುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಒಂಭತ್ತು ಜನರು ಮನೆ ತಾರಸಿ ಮೇಲೆಯೇ ರಾತ್ರಿಯಿಡೀ ಕುಳಿತುಕೊಂಡಿದ್ದಾರೆ. ಗೋಕಾಕ್ ತಾಲೂಕಾಡಳಿತ ಸಿಲುಕಿಕೊಂಡವರ ರಕ್ಷಣೆಗೆ ಧಾವಿಸಿದೆ.
Last Updated : Aug 19, 2020, 9:59 AM IST