ಅಥಣಿ:ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೆಲವು ನೆರೆ ಸಂತ್ರಸ್ತರ ಹಳ್ಳಿಗಳ ಸ್ಥಳಾಂತರ ಕಾರ್ಯ ತೀವ್ರಗತಿಯಲ್ಲಿ ಸಾಗಿರುವುದರಿಂದ ಸಪ್ತಸಾಗರ ಗ್ರಾಮದಲ್ಲಿ ವಿಶೇಷ ಗ್ರಾಮಸಭೆ ಕರೆದು ಒಕ್ಕೊರಲ ಅಭಿಪ್ರಾಯ ಸಂಗ್ರಹಿಸಲಾಯಿತು.
ನೆರೆ ಸಂತ್ರಸ್ತರ ಹಳ್ಳಿಗಳ ಸ್ಥಳಾಂತರ: ಅಧಿಕಾರಿಗಳಿಂದ ವೇಗವಾಗಿ ಸಾಗಿದ ಕಾರ್ಯ - people were shifted to another village
ನೆರೆ ಸಂತ್ರಸ್ತರ ಹಳ್ಳಿಗಳ ಸ್ಥಳಾಂತರ ಕಾರ್ಯ ತೀವ್ರಗತಿಯಲ್ಲಿ ಸಾಗಿರುವುದರಿಂದ ಸಪ್ತಸಾಗರ ಗ್ರಾಮದಲ್ಲಿ ವಿಶೇಷ ಗ್ರಾಮಸಭೆ ಕರೆದು, ಈ ಕುರಿತು ಚರ್ಚಿಸಲಾಯಿತು.
ನೆರೆಸಂತ್ರಸ್ತರ ಹಳ್ಳಿಗಳ ಸ್ಥಳಾಂತರ
ಸಭೆಯಲ್ಲಿ ಸಪ್ತಸಾಗರ ಗ್ರಾಮ ಸ್ಥಳಾಂತರ ಮಾಡುವ ವಿಷಯ ಪ್ರಸ್ತಾಪಿಸಿದ ನೋಡಲ್ ಅಧಿಕಾರಿಗಳು, ಎರಡು ಸ್ಥಳಗಳಾದ ಚಿಕ್ಕಟ್ಟಿ ಹಾಗೂ ಕರಿಮಸೂತಿ ಗ್ರಾಮಗಳು ನಿಮಗೆ ಸ್ಥಳಾಂತರವಾಗಲು ಯೋಗ್ಯ ಸ್ಥಳ ಇದೆ ಎಂದು ಹೇಳಿದರು.
ಗ್ರಾಮದ ಎಲ್ಲ ಜನರೂ ಆದಷ್ಟು ಬೇಗ ಸ್ಥಳಾಂತರ ಆಗುವಂತೆ ತಿಳಿಸಿದರು. ಈಗ ಆ ಕಾರ್ಯ ಚುರುಕುಗೊಂಡು ಸ್ಥಳಾಂತರ ಸ್ಥಳವಾದ ಚಿಕ್ಕಟ್ಟಿ ಗ್ರಾಮದ ಹಿರಿಯರೆಲ್ಲ ಸೇರಿ ಸ್ಥಳ ಪರಿಶೀಲನೆ ಮಾಡಿದರು. ಹಿರಿಯರೆಲ್ಲರೂ ಸ್ಥಳ ಪರಿಶೀಲನೆ ಮಾಡಿದ ಬಳಿಕ ಚಿಕ್ಕಟ್ಟಿ ಗ್ರಾಮದ ಜಮೀನು ವಾಸಿಸಲು ಯೋಗ್ಯವಾಗಿದೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು.