ಕರ್ನಾಟಕ

karnataka

ETV Bharat / state

ಪ್ರವಾಹ ಪ್ರಭಾವ: 'ಮಹಾ' ಚುನಾವಣೆಯಲ್ಲಿ ಮುಗ್ಗರಿಸಿದ ಕಮಲ, ರಾಜ್ಯದಲ್ಲೂ ಬಿಜೆಪಿಗೆ ಢವ ಢವ - ಮಹಾರಾಷ್ಟ್ರ ಚುನಾವಣೆ ಪ್ರವಾಹ ಪರಿಣಾಮ ಸುದ್ದಿ

ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಕೊಲ್ಲಾಪೂರ, ಸಾಂಗ್ಲಿ ಜಿಲ್ಲೆಯಲ್ಲಿ ಬಿಜೆಪಿ ಮುಗ್ಗರಿಸಿದ್ದು, ಕರ್ನಾಟಕದ ಉಪ ಚುನಾವಣೆ ಮೇಲೆ ನೆರೆ ಪ್ರಭಾವ ಬೀರಬಹುದು ಎಂಬ ಮಾತುಗಳು ಗಡಿ ಭಾಗದಲ್ಲಿ ಕೇಳಿಬರುತ್ತಿವೆ.

'ಮಹಾ' ಚುನಾವಣೆಯಲ್ಲಿ ಮುಗ್ಗರಿಸಿದ ಕಮಲ

By

Published : Oct 25, 2019, 7:04 PM IST

ಅಥಣಿ:ನೆರೆ ಸಂತ್ರಸ್ತರ ವಿಷಯದಲ್ಲಿ ಬಿಜೆಪಿ ಬೇಜವಾಬ್ದಾರಿ ತೋರಿದೆ ಎಂಬ ಆರೋಪಗಳಿವೆ. ಇದರಿಂದಾಗಿಯೇ ಮಹಾರಾಷ್ಟ್ರದ ಗಡಿ ಭಾಗದ ಕೊಲ್ಲಾಪೂರ, ಸಾಂಗ್ಲಿ ಜಿಲ್ಲೆಯಲ್ಲಿ ಬಿಜೆಪಿ ಮುಗ್ಗರಿಸಿದೆ ಎನ್ನಲಾಗ್ತಿದೆ. ಇತ್ತ ಕರ್ನಾಟಕದ ಉಪ ಚುನಾವಣೆ ಮೇಲೆ ನೆರೆ ಪ್ರಭಾವ ಬೀರಬಹುದು ಎಂಬ ಲೆಕ್ಕಾಚಾರಗಳು ಗಡಿ ಭಾಗದಲ್ಲಿ ಶುರುವಾಗಿವೆ.

'ಮಹಾ' ಚುನಾವಣೆಯಲ್ಲಿ ಮುಗ್ಗರಿಸಿದ ಕಮಲ

ಸದ್ಯ ಅಥಣಿ, ಕಾಗವಾಡ, ಗೋಕಾಕ್, ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ ಆಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಕರ್ನಾಟಕ-ಮಹಾರಾಷ್ಟ್ರ ಗಡಿಭಾಗಗಳಲ್ಲಿ ಪ್ರವಾಹಕ್ಕೆ ಜನರು ತತ್ತರಿಸಿಹೋಗಿದ್ದರು. ಈ ನೈಸರ್ಗಿಕ ವಿಕೋಪವನ್ನು, ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ ಎನ್ನುವುದು ಗಡಿ ಭಾಗದ ಜನರ ಆರೋಪವಾಗಿದೆ.

ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಪರಿಹಾರಧನ ನೀಡದಿದ್ದರೆ, ಮಹಾರಾಷ್ಟ್ರದಲ್ಲಿ ಆದ ಪರಿಣಾಮ ಕರ್ನಾಟಕದಲ್ಲೂ ಮರುಕಳಿಸುವ ಸಾಧ್ಯತೆಯಿದೆ. ಉಪ ಚುನಾವಣೆ ಹತ್ತಿರವಾಗುತ್ತಿದ್ದು ರಾಜ್ಯ ರಾಜಕೀಯದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಅನ್ನೋದನ್ನು ಕಾದು ನೋಡಬೇಕಿದೆ.

For All Latest Updates

TAGGED:

ABOUT THE AUTHOR

...view details