ಬೆಳಗಾವಿ:ರಕ್ಕಸ ಪ್ರವಾಹಕ್ಕೆ ಸಿಲುಕಿ ಖಾನಾಪುರ ತಾಲೂಕಿನ ಹಿರೇಹಟ್ಟಿಹೋಳಿ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮನೆಗಳು ನೆಲಕ್ಕುರುಳಿವೆ.
ಭೀಕರ ಪ್ರವಾಹಕ್ಕೆ ಊರಿಗೆ ಊರೇ ಸರ್ವನಾಶ... 60ಕ್ಕೂ ಹೆಚ್ಚು ಮನೆಗಳು ಧರಾಶಾಹಿ - ಬೆಳಗಾವಿ ಪ್ರವಾಹ ಸುದ್ದಿ
ಬೆಳಗಾವಿಯಲ್ಲಿ ಮಲಪ್ರಭಾ ನದಿ ಪ್ರವಾಹಕ್ಕೆ ಸಿಕ್ಕು ಊರಿಗೆ ಊರೇ ಸರ್ವನಾಶವಾಗಿದೆ.

60ಕ್ಕೂ ಹೆಚ್ಚು ಮನೆಗಳು ಧರಾಶಾಹಿ
ಮಲಪ್ರಭಾ ನದಿ ಪ್ರವಾಹಕ್ಕೆ ಸಿಕ್ಕು ನೂರು ವರ್ಷದ ಮನೆಗಳು ಸೇರಿದಂತೆ 60ಕ್ಕೂ ಹೆಚ್ಚು ಮನೆಗಳು ಧರೆಗುರುಳಿದ್ದು ಊರಿಗೆ ಊರೇ ಸರ್ವನಾಶವಾಗಿದೆ.
ಖಾನಾಪುರ ತಾಲೂಕಿನ ಹಿರೇಹಟ್ಟಿಹೋಳಿ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮನೆಗಳು ಧರಾಶಾಹಿ
ಮನೆಗಳನ್ನ ಕಳೆದುಕೊಂಡ ಜನರ ಗೋಳು ಹೇಳ ತೀರದಾಗಿದೆ. ಅಕ್ಕವ್ವಾ ದೊಡವಾಡ ಎಂಬುವರು ಗಂಡನನ್ನ ಕಳೆದುಕೊಂಡು ಸಹೋದರನ ಮನೆಯಲ್ಲಿ ವಾಸಿಸುತ್ತಿದ್ದರು. ಆದರೀಗ ಅವರ ಮನೆ ಕೂಡ ಬಿದ್ದು ಹೋಗಿದ್ದು, ಸಹೋದರನ ಮನೆಗೆ ಸರ್ಕಾರ ಪರಿಹಾರ ಕೊಡುತ್ತೆ, ನಾನು ಎಲ್ಲಿ ಹೋಗಲಿ. ಯಾವುದಾದರೂ ಗುಡಿ ನೋಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ.