ಬೆಳಗಾವಿ: ಪರಿಹಾರ ಕೇಂದ್ರದಿಂದ ತಮ್ಮನ್ನು ಹೊರ ಹಾಕಲಾಗಿದೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಗೋಕಾಕ್ ನಗರದ ಸರ್ಕಾರಿ ಶಾಲೆಯಲ್ಲಿರುವ ನೆರೆ ಸಂತ್ರಸ್ತರು ಪ್ರತಿಭಟನೆ ನಡೆಸಿದ್ರು.
ಪರಿಹಾರ ಕೇಂದ್ರದಿಂದ ಹೊರಗೆ ಹಾಕಿದ ಆರೋಪ: ಅಧಿಕಾರಿಗಳ ವಿರುದ್ಧ ಸಂತ್ರಸ್ತರ ಪ್ರತಿಭಟನೆ - ಘಟಪ್ರಭಾ ನದಿ ಪ್ರವಾಹ
ಪರಿಹಾರ ಕೇಂದ್ರದಿಂದ ಹೊರ ಅಧಿಕಾರಿಗಳು ತಮ್ಮನ್ನು ಹೊರಹಾಕುತ್ತಿದ್ದಾರೆ ಎಂದು ಆರೋಪಿಸಿ ಗೋಕಾಕ್ ನಗರದ ಸರ್ಕಾರಿ ಶಾಲೆಯಲ್ಲಿರುವ ನೆರೆ ಸಂತ್ರಸ್ತರು ಪ್ರತಿಭಟನೆ ನಡೆಸಿದ್ರು.
ಪರಿಹಾರ ಕೇಂದ್ರದಲ್ಲಿಲ್ಲ ನೆರೆ ಸಂತ್ರಸ್ತರಿಗೆ ಜಾಗ; ಅಧಿಕಾರಿಗಳ ಕ್ರಮ ಖಂಡಿಸಿ ಪ್ರತಿಭಟನೆ
ನಗರದ ಬಸವೇಶ್ವರ ವೃತ್ತದಲ್ಲಿ ಸಂತ್ರಸ್ತರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಸಂತ್ರಸ್ತರು ಘೋಷಣೆ ಕೂಗಿದ್ರು. ಘಟಪ್ರಭಾ ನದಿ ಪ್ರವಾಹಕ್ಕೆ ಸೂರು ಕಳೆದುಕೊಂಡಿದ್ದ ನಗರದ 50ಕ್ಕೂ ಅಧಿಕ ಕುಟುಂಬಗಳಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು. ಸೂರು ನೀಡದೇ ಏಕಾಏಕಿ ಹೊರಗೆ ದಬ್ಬಿದ್ರೆ ಎಲ್ಲಿಗೆ ಹೋಗೋದು ಎಂಬುದು ಸಂತ್ರಸ್ತರ ಅಳಲಾಗಿದೆ.
ಶಾಲೆ ಆರಂಭಿಸುವ ನೆಪ ಹೇಳಿ ಸಂತ್ರಸ್ತರನ್ನು ಪರಿಹಾರ ಕೇಂದ್ರದಿಂದ ಹೊರಹಾಕಲಾಗುತ್ತಿದೆ ಎಂದು ದೂರಿದರು. ಮಹಿಳೆಯರು, ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.