ಅಥಣಿ: ತಾಲೂಕಿನಲ್ಲಿ ಇಂದು 5 ಕೊರೊನಾ ವೈರಸ್ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 30ಕ್ಕೆ ಏರಿದೆ.
ಅಥಣಿಯಲ್ಲಿಂದು 5 ಕೊರೊನಾ ಪ್ರಕರಣ ಪತ್ತೆ: 30ಕ್ಕೇರಿದ ಸೋಂಕಿತರ ಸಂಖ್ಯೆ - Athani
ಅಥಣಿ ತಾಲೂಕಿನಲ್ಲಿ ಇಂದು ಎರಡು ಪ್ರಕರಣಗಳು ಹಾಗೂ ತಾಲೂಕಿನ ಅನಂತಪುರ ಗ್ರಾಮದಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.
![ಅಥಣಿಯಲ್ಲಿಂದು 5 ಕೊರೊನಾ ಪ್ರಕರಣ ಪತ್ತೆ: 30ಕ್ಕೇರಿದ ಸೋಂಕಿತರ ಸಂಖ್ಯೆ Athani](https://etvbharatimages.akamaized.net/etvbharat/prod-images/768-512-7907353-526-7907353-1593967816071.jpg)
ಅಥಣಿ
ಇಂದು ಪಟ್ಟಣದಲ್ಲಿ ಎರಡು ಪ್ರಕರಣಗಳು ಹಾಗೂ ತಾಲೂಕಿನ ಅನಂತಪುರ ಗ್ರಾಮದಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಪಟ್ಟಣದಲ್ಲಿ ಓರ್ವ ಮಹಿಳೆ ಮತ್ತು ಓರ್ವ ಪುರುಷನಿಗೆ ಸೋಂಕು ದೃಢಪಟ್ಟಿದ್ದು, ಅನಂತಪುರ ಗ್ರಾಮದಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿಗೆ ಸೋಂಕು ಕಾಣಿಸಿಕೊಂಡಿದೆ.
ಅನಂತಪುರ ಗ್ರಾಮದಲ್ಲಿ ಇದುವರೆಗೂ ಐದು ಕೊರೊನಾ ವೈರಸ್ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದ ನಂಟು ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ. ಗ್ರಾಮದಲ್ಲಿ ಸ್ವಯಂ ಘೋಷಿತವಾಗಿ ಬಂದ್ ಮಾಡಲಾಗಿದೆ. ಅನಂತಪುರ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಗ್ರಾಮವಾಗಿದ್ದರಿಂದ ಊರಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.