ಬೆಳಗಾವಿ: ಹನಿಟ್ರ್ಯಾಪ್ ಮೂಲಕ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟ ಆರೋಪದಡಿ ಮೂವರು ಮಹಿಳೆಯರು ಸೇರಿ ಐವರನ್ನು ಬಂಧಿಸಲಾಗಿದೆ.
ಹನಿಟ್ರ್ಯಾಪ್ ಮೂಲಕ ಲಕ್ಷಾಂತರ ರೂ.ಗೆ ಬೇಡಿಕೆ: ಮೂವರು ಮಹಿಳೆಯರು ಸೇರಿ ಐವರು ಬಂಧನ - accused arrested in belgaum
ಹನಿಟ್ರ್ಯಾಪ್ ನಡೆಸಿ ಯೂಟ್ಯೂಬ್ ಚಾನೆಲ್ ಒಂದರ ಹೆಸರಿನಲ್ಲಿ ಹಣ ವಸೂಲಿಗೀಳಿದ ಆರೋಪಿಗಳನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಮಾಳಮಾರುತಿ ಠಾಣೆ ಪೊಲೀಸರು ಖಾಸಗಿ ಲಾಡ್ಜ್ ಮೇಲೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಅಥಣಿ ತಾಲೂಕಿನ ಹುಲಗಬಾಳಿಯ ಸದಾಶಿವ ಚಿಪ್ಪಲಕಟ್ಟಿ, ಬೆಳಗಾವಿ ನೆಹರು ನಗರದ ರಘುನಾಥ ಧುಮ್ಮಾಳೆ ಹಾಗೂ ಸವದತ್ತಿ, ಉಗರಗೋಳ ಗ್ರಾಮದ ಮೂವರು ಮಹಿಳೆಯರು ಬಂಧಿತರಾಗಿದ್ದಾರೆ.
ಜಮಖಂಡಿ ಮೂಲದ ವ್ಯಕ್ತಿಯನ್ನು ಹನಿಟ್ರ್ಯಾಪ್ ಮಾಡಿ ಐದು ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಐವರನ್ನು ಬಂಧಿಸಲಾಗಿದೆ.ಇವರು ಯೂಟ್ಯೂಬ್ ಚಾನೆಲ್ ಒಂದರ ಹೆಸರಿನಲ್ಲಿ ಹಣ ವಸೂಲಿಗೀಳಿದ ಆರೋಪ ಕೇಳಿ ಬಂದಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.