ಚಿಕ್ಕೋಡಿ: ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ವೇಳೆ ಆಕಸ್ಮಿಕವಾಗಿ ಕಬ್ಬು ಕಟಾವು ಮಿಷನ್‌ಗೆ ಬೆಂಕಿ ಹತ್ತಿದ್ದರಿಂದ ಎರಡರಿಂದ ಮೂರು ಎಕರೆ ಕಬ್ಬು ಬೆಂಕಿಗಾಹುತಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದಲ್ಲಿ ನಡೆದಿದೆ.
ಕಬ್ಬು ಕಟಾವು ಮಿಷನ್‌ಗೆ ಬೆಂಕಿ; ಕಬ್ಬು ಬೆಂಕಿಗಾಹುತಿ - ಚಿಕ್ಕೋಡಿ ಕಬ್ಬಿನ ಗದ್ದೆಗೆ ಬೆಂಕಿ
ಚಿಕ್ಕೋಡಿ ತಾಲೂಕಿನ ಮಂಗಾವತಿ ಗ್ರಾಮದ ಜಮೀನೊಂದರಲ್ಲಿ ಕಬ್ಬು ಕಟಾವು ಮಾಡುವ ವೇಳೆ ಆಕಸ್ಮಿಕವಾಗಿ ಕಬ್ಬು ಕಟಾವು ಮಿಷನ್‌ಗೆ ಬೆಂಕಿ ಹತ್ತಿದ್ದರಿಂದ ಎರಡರಿಂದ ಮೂರು ಎಕರೆ ಕಬ್ಬು ಬೆಂಕಿಗಾಹುತಿಯಾಗಿದೆ.
ಎಡ್ಮೂರು ಎಕರೆ ಕಬ್ಬು ಬೆಂಕಿಗಾಹುತಿ
ತಾಲೂಕಿನ ಚಂದೂರ ಗ್ರಾಮದ ಅನಿಲ ಪಾಟೀಲ ಅವರಿಗೆ ಸೇರಿದ ಕಬ್ಬು ಕಟಾವು ಮಿಷನ್ನಿಂದ ಕಬ್ಬನ್ನು ಕಟಾವು ಮಾಡುವ ವೇಳೆ ಮಿಷನ್‌ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ನಂತರ ಅದು ಕಬ್ಬಿನ ಗದ್ದೆಗೆ ತಗುಲಿದೆ.
ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಕೂಡ ಸಾಧ್ಯವಾಗದ ಕಾರಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಮುಂದಾದರು.