ಕರ್ನಾಟಕ

karnataka

ETV Bharat / state

ಅಥಣಿ ಗ್ಯಾರೇಜ್​​ನಲ್ಲಿ ಆಕಸ್ಮಿಕ ಬೆಂಕಿ.. ಕೆಲಕಾಲ ಆತಂಕಕ್ಕೊಳಗಾದ ಸ್ಥಳೀಯರು! - athani fire case

ಅಥಣಿ ಹೊರವಲಯದ ರೇಣುಕಾ ದೇವಸ್ಥಾನದ ಬಳಿ ಸದಾಶಿವ ಶ್ರೀಪಾದ ಗೌಳಿ ಎಂಬುವರಿಗೆ ಸೇರಿದ ಗ್ಯಾರೇಜ್ ಬೆಂಕಿಗಾಹುತಿಯಾಗಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ಮಶಿನ್ ಸುಟ್ಟು ಕರುಕಲಾಗಿವೆ.

fire in garage near athani
ಅಥಣಿಯ ಗ್ಯಾರೇಜ್​​ನಲ್ಲಿ ಆಕಸ್ಮಿಕ ಬೆಂಕಿ...ಕೆಲಕಾಲ ಆತಂಕಕ್ಕೊಳಗಾದ ಸ್ಥಳೀಯರು!

By

Published : Jan 14, 2021, 9:39 AM IST

ಅಥಣಿ:ಪಟ್ಟಣದ ಹೊರವಲಯದಲ್ಲಿನ ಟೈಯರ್ ರಿಪೇರಿ ಮಾಡುವ ಗ್ಯಾರೇಜ್​​​ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಸುತ್ತಮುತ್ತಲಿನ ನಿವಾಸಿಗಳು ಕೆಲ ಕಾಲ ಆತಂಕಕ್ಕೊಳಗಾಗಿದ್ದರು.

ಗ್ಯಾರೇಜ್​​ನಲ್ಲಿ ಆಕಸ್ಮಿಕ ಬೆಂಕಿ

ಅಥಣಿ ಹೊರವಲಯದ ರೇಣುಕಾ ದೇವಸ್ಥಾನದ ಬಳಿ ಸದಾಶಿವ ಶ್ರೀಪಾದ ಗೌಳಿ ಎಂಬುವರಿಗೆ ಸೇರಿದ ಗ್ಯಾರೇಜ್ ಬೆಂಕಿಗಾಹುತಿಯಾಗಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ಮಷಿನ್ ಸುಟ್ಟು ಕರುಕಲಾಗಿವೆ.

ಇನ್ನೂ ಅಥಣಿ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಮುಂದಾದಾಗ ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಜೆಸಿಬಿ ಯಂತ್ರದ ಸಹಾಯದಿಂದ ಗ್ಯಾರೇಜ್ ತಗಡುಗಳನ್ನು ಮುರಿದು ಬೆಂಕಿಯನ್ನು ನಂದಿಸಲಾಯಿತು.

ಈ ಸುದ್ದಿಯನ್ನೂ ಓದಿ:ಶಿವಮೊಗ್ಗ: ದರೋಡೆಗೆ ಹೊಂಚು ಹಾಕಿದ್ದ ಖದೀಮರು ಪೊಲೀಸ್ ಬಲೆಗೆ

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ABOUT THE AUTHOR

...view details