ಬೆಳಗಾವಿ: ಮನೆಗಳ್ಳತನ ಮಾಡಿ ಸಾಕ್ಷಿ ನಾಶ ಪಡಿಸಲು ಖದೀಮರು ಇಡೀ ಮನೆಗೆ ಬೆಂಕಿ ಇಟ್ಟ ಘಟನೆ ತಾಲೂಕಿನ ಕಣಬರಗಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿಯಲ್ಲಿ ಖದೀಮರ ಅಟ್ಟಹಾಸ... ಕಳ್ಳತನ ಮಾಡಿ ಮನೆಗೆ ಬೆಂಕಿಯಿಟ್ಟು ಪರಾರಿ - ಬೆಳಗಾವಿ ತಾಲೂಕಿನ ಕಣಬರಗಿ ಗ್ರಾಮದಲ್ಲಿ ಕಳ್ಳತನ
ಮನೆಗಳ್ಳತನ ಮಾಡಿ ಸಾಕ್ಷಿ ನಾಶ ಪಡಿಸಲು ಖದೀಮರು ಇಡೀ ಮನೆಗೆ ಬೆಂಕಿ ಇಟ್ಟ ಘಟನೆ ಬೆಳಗಾವಿ ತಾಲೂಕಿನ ಕಣಬರಗಿ ಗ್ರಾಮದಲ್ಲಿ ನಡೆದಿದೆ.
![ಬೆಳಗಾವಿಯಲ್ಲಿ ಖದೀಮರ ಅಟ್ಟಹಾಸ... ಕಳ್ಳತನ ಮಾಡಿ ಮನೆಗೆ ಬೆಂಕಿಯಿಟ್ಟು ಪರಾರಿ](https://etvbharatimages.akamaized.net/etvbharat/prod-images/768-512-4976697-thumbnail-3x2-theft.jpg)
ಕಳ್ಳತನ ಮಾಡಿ ಮನೆಗೆ ಬೆಂಕಿಯಿಟ್ಟು ಪರಾರಿ
ಕಳ್ಳತನ ಮಾಡಿ ಮನೆಗೆ ಬೆಂಕಿಯಿಟ್ಟು ಪರಾರಿ
ಸೋನಪ್ಪ ತಳವಾರ ಎಂಬುವವರಿಗೆ ಸೇರಿದ ಮನೆ ಕಳ್ಳತನವಾಗಿದೆ. ಕುಟುಂಬಸ್ಥರು ಊರಿಗೆ ಹೋದಾಗ ದುಷ್ಕರ್ಮಿಗಳು ಮನೆಯ ಬೀಗ ಒಡೆದು ಕಳ್ಳತನ ಮಾಡಿದ್ದಾರೆ. 50 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ ಆಭರಣ, 25 ಸಾವಿರ ರೂಪಾಯಿ ನಗದು, ಟಿವಿ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿರುವ ಖದೀಮರು ಸಾಕ್ಷಿ ನಾಶಪಡಿಸಲು ಇಡೀ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಪರಿಣಾಮ ಮನೆಯಲ್ಲಿನ ಅಳಿದುಳಿದ ವಸ್ತುಗಳು ಸಹ ಸುಟ್ಟು ಕರಕಲಾಗಿವೆ.
ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.