ಕರ್ನಾಟಕ

karnataka

ETV Bharat / state

ವಿದ್ಯುತ್​ ತಂತಿ ತುಂಡಾಗಿ ಬಿದ್ದು ಅವಘಡ : ಕಟಾವಿಗೆ ಬಂದಿದ್ದ 8 ಎಕರೆ ಕಬ್ಬು ಬೆಂಕಿಗಾಹುತಿ - Fire breaks out in Bailahongala

ಬೆಳಗಾವಿಯ ಬೈಲಹೊಂಗಲ ಬಳಿ ಬೆಂಕಿ ಅವಘಡದಿಂದ ಕಟಾವಿಗೆ ಬಂದಿದ್ದ ಕಬ್ಬು ಬೆಳೆ ನಾಶವಾಗಿದೆ.

Fire breaks out near Bailahongala of Belgavi
ಬೆಂಕಿಗಾಹುತಿಯಾದ ಕಬ್ಬು ಬೆಳೆ

By

Published : Nov 12, 2020, 6:31 PM IST

ಬೆಳಗಾವಿ :ವಿದ್ಯುತ್ ತಂತಿ ತುಂಡರಿಸಿ ಬಿದ್ದು ಬೆಂಕಿ ಹತ್ತಿಕೊಂಡ ಪರಿಣಾಮ ಕಟಾವಿಗೆ ಬಂದಿದ್ದ 8 ಎಕರೆ ಕಬ್ಬು ಬೆಂಕಿಗಾಹುತಿಯಾದ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಕ್ರಾಸ್ ಬಳಿ ನಡೆದಿದೆ.

ಬೈಲಹೊಂಗಲ ತಾಲೂಕು ಸಂಪಗಾಂವ ಗ್ರಾಮದ ರೈತ ಸಂಗಪ್ಪ ಕಾದ್ರೊಳ್ಳಿ ಎಂಬುವರಿಗೆ ಸೇರಿದ ಕಬ್ಬು ಬೆಳೆ ಬೆಂಕಿಗಾಹುತಿಯಾಗಿದೆ. ಗದ್ದೆ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಹೊತ್ತಿದ ಬೆಂಕಿ, ಕ್ಷಣಾರ್ಧದಲ್ಲಿ ಇಡೀ ಜಮೀನಿಗೆ ಆವರಿಸಿದೆ. ಪರಿಣಾಮ ಬೆಳೆದು ನಿಂತ ಕಬ್ಬು ಬೆಳೆ ಸುಟ್ಟು ಕರಕಲಾಗಿದೆ.

ಬೆಂಕಿಗಾಹುತಿಯಾದ ಕಬ್ಬು ಬೆಳೆ

ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ ಪಟ್ಟರೂ ಸಾಧ್ಯವಾಗಿಲ್ಲ. ಬಳಿಕ ಬೈಲಹೊಂಗಲ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details