ಬೆಳಗಾವಿ :ಆಕಸ್ಮಿಕ ಬೆಂಕಿ ತಗುಲಿ ಗಾದಿ ತಯಾರಿಕಾ ಕಾರ್ಖಾನೆ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಗರದಲ್ಲಿ ನಡೆದಿದೆ.
ಕಿಲ್ಲಾ ರಸ್ತೆಯಲ್ಲಿರುವ ಮಾಡರ್ನ್ ಗಾದಿ ಕಾರ್ಖಾನೆಗೆ ಬೆಂಕಿ ತಗುಲಿದೆ. ಇದು ಜಲೀಲ್ ಹುಬ್ಬಳ್ಳಿಕರ ಮತ್ತು ಖಲೀಲ್ ಹುಬ್ಬಳ್ಳಿಕರ ಎಂಬುವರಿಗೆ ಸೇರಿದ ಕಾರ್ಖಾನೆಯಾಗಿದೆ. ಮಧ್ಯಾಹ್ನ ಕಾರ್ಖಾನೆ ಸಿಬ್ಬಂದಿ ನಮಾಜ್ಗೆ ತೆರಳಿದ್ದರು. ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.