ಕರ್ನಾಟಕ

karnataka

ETV Bharat / state

ಈರಣ್ಣ‌ ಕಡಾಡಿ ಕಾರು ಅಡ್ಡಗಟ್ಟಿದ ಪ್ರಕರಣ: 18 ಜನರ ವಿರುದ್ಧ ಎಫ್​ಐಆರ್

ನವೆಂಬರ್ 1 ರಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಕಾರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ಬೆಂಬಲಿಗರು ಅಡ್ಡಗಟ್ಟಿ ಮುತ್ತಿಗೆ ಹಾಕಿದ್ದರು.

Eranna Kadadi
ರಾಜ್ಯಸಭಾ ಸದಸ್ಯ ಈರಣ್ಣ‌ ಕಡಾಡಿ

By

Published : Nov 13, 2022, 2:26 PM IST

ಬೆಳಗಾವಿ: ರಾಜ್ಯಸಭಾ ಸದಸ್ಯ ಈರಣ್ಣ‌ ಕಡಾಡಿ ಅವರ ಕಾರು ಅಡ್ಡಗಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟಪ್ರಭಾ ‌ಪೊಲೀಸ್ ಠಾಣೆಯಲ್ಲಿ 18 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ನವೆಂಬರ್ 1 ರಂದು ಈರಣ್ಣ ಕಡಾಡಿ ಕಾರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಬೆಂಬಲಿಗರು ಅಡ್ಡಗಟ್ಟಿ ಮುತ್ತಿಗೆ ಹಾಕಿದ್ದರು.

ಇದಕ್ಕೂ ಮೊದಲು ಸತೀಶ್ ಜಾರಕಿಹೊಳಿ ಅವರನ್ನು ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಸತೀಶ್ ಜಾರಕಿಹೊಳಿ‌ ಪರವಾಗಿ ವಿವಿಧ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ಅದೇ ಮಾರ್ಗವಾಗಿ ಸಂಚಾರ ಮಾಡುತ್ತಿದ್ದ ಕಡಾಡಿ ಕಾರಿಗೆ ಜಾರಕಿಹೊಳಿ‌ ಬೆಂಬಲಿಗರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಪಂಚಮಸಾಲಿ ಸಮುದಾಯದ ನಾಯಕರು ಖಂಡಿಸಿದ್ದರು.

ಇದನ್ನೂ ಓದಿ:ಬೆಳಗಾವಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾರಿಗೆ ಸತೀಶ್​ ಜಾರಕಿಹೊಳಿ ಬೆಂಬಲಿಗರಿಂದ ಮುತ್ತಿಗೆ..!

ABOUT THE AUTHOR

...view details