ಕರ್ನಾಟಕ

karnataka

ETV Bharat / state

ಕಂಕಣವಾಡಿ ಸರ್ಕಾರಿ ಜಾಗ ದುರ್ಬಳಕೆ ಆರೋಪ: 150 ಜನರ ಮೇಲೆ ಪ್ರಕರಣ ದಾಖಲು - chikkodi tahasilfdar news

ಕಂಕಣವಾಡಿ ಗ್ರಾಮದ ಸರ್ಕಾರಿ ಗೈರಾಣ ರಿ.ಸಂಖೈ 94 ಮತ್ತು 3 ರಲ್ಲಿ 1961 ರಿಂದ ಇಲ್ಲಿಯವರೆಗೆ ಅಕ್ರಮವಾಗಿ ಪ್ರವೇಶ ಮಾಡಿ, ವಾಣಿಜ್ಯ ಮಳಿಗೆಗಳು, ಮನೆಗಳು, ಶೆಡ್‌ಗಳನ್ನು ನಿರ್ಮಿಸಿಕೊಂಡು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿದೆ.

Misuse of government space
ಸರ್ಕಾರಿ ಜಾಗ ದುರ್ಬಳಕೆ

By

Published : Jul 7, 2020, 3:03 PM IST

ಚಿಕ್ಕೋಡಿ:ಸರ್ಕಾರದ ಗೈರಾಣ ಜಮೀನನ್ನು ದುರ್ಬಳಕೆ ಮಾಡಿ ಅನಧಿಕೃತವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು‌ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ 150 ಜನರ ಮೇಲೆ ತಹಸೀಲ್ದಾರ್​ ಚಂದ್ರಕಾಂತ ಭಜಂತ್ರಿ ಪ್ರಕರಣ ದಾಖಲಿಸಿದ್ದಾರೆ.

ಕಂಕಣವಾಡಿ ಗ್ರಾಮದ ಸರ್ಕಾರಿ ಗೈರಾಣ ರಿ.ಸಂಖೈ 94 ಮತ್ತು 3 ರಲ್ಲಿ 1961 ರಿಂದ ಇಲ್ಲಿಯವರೆಗೆ ಅಕ್ರಮವಾಗಿ ಪ್ರವೇಶ ಮಾಡಿ, ವಾಣಿಜ್ಯ ಮಳಿಗೆಗಳು, ಮನೆಗಳು, ಶೆಡ್‌ಗಳನ್ನು ನಿರ್ಮಿಸಿಕೊಂಡು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿದೆ.

ಎಫ್‌ಐಆರ್ ಪ್ರತಿ

ಈ ಹಿಂದೆ ಸರ್ಕಾರದ ಆದೇಶ ಖಂಡಿಸಿ ಕಂಕಣವಾಡಿ ಪಟ್ಟಣದ ನಿವಾಸಿಗಳು ಪ್ರತಿಭಟನೆ ಕೂಡ ನಡೆಸಿದ್ದರು. ಅಷ್ಟೇ ಅಲ್ಲದೇ ಪಟ್ಟಣಕ್ಕೆ ಭೇಟಿ ನೀಡಿದ್ದ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರಿಗೆ ಘೇರಾವ್​ ಹಾಕಿ ವಿರೋಧ ವ್ಯಕ್ತಪಡಿಸಿದ್ದರು. ಸದ್ಯ ತಹಸೀಲ್ದಾರ್​​ 150 ಜನರ ವಿರುದ್ಧ ಸರ್ಕಾರದ ಜಮೀನು ಅತಿಕ್ರಮಣ, ದುರ್ಬಳಕೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ಸುಮಾರು‌ 30ಕ್ಕೂ ಹೆಚ್ಚು ವರ್ಷದಿಂದ ಕಂಕಣವಾಡಿ ಗ್ರಾಮದ ಗೈರಾಣ ಜಮೀನಿನಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಸರ್ಕಾರಿ‌ ಜಾಗದಲ್ಲಿ ಮನೆಗಳಿಗೆ ವಿದ್ಯುತ್, ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೆ, ಈಗ ತಕ್ಷಣವೇ ಜಾಗ ಖಾಲಿ ಮಾಡಿ ಎಂದು ತಹಸೀಲ್ದಾರ್​ ನೋಟಿಸ್ ಕೂಡಾ ಜಾರಿ ಮಾಡಿದ್ದಾರೆ. ಇದರಿಂದ ಕಂಕಣವಾಡಿ ನೂರಾರು ಕುಟುಂಬಗಳು ಈಗ ಬೀದಿಗೆ ಬೀಳುವ ಪ್ರಸಂಗ ಎದುರಾಗಿದೆ.

ABOUT THE AUTHOR

...view details