ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದ 573 ಜನರ ವಿರುದ್ಧ ಜಿಲ್ಲಾಡಳಿತ ಎಫ್ಐಆರ್ ದಾಖಲಿಸಲು ಮುಂದಾಗಿದೆ.
ಕ್ವಾರಂಟೈನ್ ನಿಯಮ ಉಲ್ಲಂಘನೆ: ಬೆಳಗಾವಿಯಲ್ಲಿ 573 ಜನರ ವಿರುದ್ಧ ಕ್ರಮ
ಬೆಳಗಾವಿಯಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದ 573 ಜನರ ವಿರುದ್ಧ ಜಿಲ್ಲಾಡಳಿತ ಎಫ್ಐಆರ್ ದಾಖಲಿಸಲು ಮುಂದಾಗಿದೆ.
ಕೊವೀಡ್-19 ನಿಯಂತ್ರಣಕ್ಕೆ ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದಿದ್ದ ವಲಸಿಗರಿಗೆ ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್ಗಾಗಿ ಜಾರಿಗೊಳಿಸಿದ್ದ ನಿಯಮಗಳನ್ನು ಜಿಲ್ಲೆಯಲ್ಲಿ 573 ಜನರು ಉಲ್ಲಂಘನೆ ಮಾಡಿದ್ದಾರೆ. ಹಾಗಾಗಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ವಿರುದ್ಧ ದೂರು ದಾಖಲಿಸುವಂತೆ ಕ್ವಾರಂಟೈನ್ ನೋಡಲ್ ಅಧಿಕಾರಿಗಳು ತಹಶೀಲ್ದಾರ್ಗೆ ಸೂಚನೆ ನೀಡಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಹೋಮ್ ಕ್ವಾರಂಟೈನ್ ಸಹಿತ 20 ಸಾವಿರಕ್ಕೂ ಅಧಿಕ ಶಂಕಿತರು ಕ್ವಾರಂಟೈನ್ ಅವಧಿ ಪೂರೈಸಿದ್ದಾರೆ. ಬೆಳಗಾವಿ ನಗರದಲ್ಲಿ 76, ಬೆಳಗಾವಿ ಗ್ರಾಮೀಣ 103, ಹುಕ್ಕೇರಿ 55, ಖಾನಾಪುರ 54, ಬೈಲಹೊಂಗಲ 28, ಸವದತ್ತಿ15, ರಾಮದುರ್ಗ 11, ಗೋಕಾಕ್, 45, ಮೂಡಲಗಿ 13, ಅಥಣಿ 37, ಖಾಗವಾಡ 16, ಚಿಕ್ಕೋಡಿ 30, ನಿಪ್ಪಾಣಿ 48, ರಾಯಭಾಗ 24 ಹಾಗೂ ಕಿತ್ತೂರಲ್ಲಿ 18 ಶಂಕಿತರು ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.