ಬೆಳಗಾವಿ:ಪೀರನವಾಡಿಯಲ್ಲಿ ಪ್ರತಿಷ್ಠಾಪಿಸಿರುವ ಸಂಗೊಳ್ಳಿ ರಾಯಣ್ಣ ಮೂರ್ತಿ ಸುತ್ತಲೂ ಮುಂಜಾಗೃತಾ ಕ್ರಮವಾಗಿ ಬ್ಯಾರಿಕೇಡ್ ಹಾಕಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಅಲ್ಲದೆ ಕರವೇ ಅಧ್ಯಕ್ಷರೂ ಸೇರಿ 22 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಸೇರಿ 22 ಜನರ ವಿರುದ್ಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಣ್ಣ ಪ್ರತಿಮೆ ಬಳಿ ಬ್ಯಾರಿಕೇಡ್ ಹಾಕಿರುವುದು ಸಂಗೊಳ್ಳಿ ರಾಯಣ್ಣ ಮೂರ್ತಿ ಮರು ಪ್ರತಿಷ್ಠಾಪನೆ ಮಾಡಿದವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕಾನೂನು ಬಾಹಿರವಾಗಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಆರೋಪ ಮಾಡಲಾಗಿದ್ದು, ದೀಪಕ್ ಗುಡಗನಟ್ಟಿ ಸೇರಿ ಕರವೇ ಕಾರ್ಯಕರ್ತರು ಹಾಗೂ ರಾಯಣ್ಣ ಅಭಿಮಾನಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರಾಯಣ್ಣ ಪ್ರತಿಮೆ ಬಳಿ ಬಿಗಿ ಬಂದೋಬಸ್ತ್
ರಾಯಣ್ಣ ಪ್ರತಿಮೆ ಸುತ್ತಲೂ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದ್ದು, ಓರ್ವ ಎಸಿಪಿ ಸೇರಿದಂತೆ 5 ಡಿಆರ್ ಪೊಲೀಸ್ ವಾಹನಗಳು ಮತ್ತು ಚೆನ್ನಮ್ಮ ಪಡೆಯಿಂದ ಪೀರನವಾಡಿಯಲ್ಲಿ ಭದ್ರತೆ ಒದಗಿಸಲಾಗಿದೆ. ಇನ್ನು ಪ್ರತಿಮೆ ಸ್ಥಳದ ಬಳಿ ಯಾರೂ ತೆರಳದಂತೆ ಪೊಲೀಸರು ಸೂಚನೆ ನೀಡಿದ್ದಾರೆ.