ಕರ್ನಾಟಕ

karnataka

ETV Bharat / state

ಏರುಗತಿಯಲ್ಲಿದೆ ಕೊರೊನಾ ಪಯಣ: ಬೆಳಗಾವಿಯಲ್ಲಿ ದಂಡ ವಸೂಲಿಗಿಳಿದ ಪಾಲಿಕೆ - Increased corona case in Belgaum

ರಾಜ್ಯದಲ್ಲಿ ನಿರಂತರವಾಗಿ ಏರುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ರೀತಿ ಬೆಳಗಾವಿಯಲ್ಲಿ ಮಾಸ್ಕ್​ ಧರಿಸದೆ ಕೋವಿಡ್​ ಮಾರ್ಗಸೂಚಿಯನ್ನು ಉಲ್ಲಂಘಿಸುತ್ತಿರುವವರ ವಿರುದ್ಧ ಮಹಾನಗರ ಪಾಲಿಕೆ ಸಿಬ್ಬಂದಿ ದಂಡ ವಸೂಲಿಗೆ ಮುಂದಾಗಿದ್ದಾರೆ.

fines-collection-from-belgaum-metropolitan-staff
ಬೆಳಗಾವಿಯಲ್ಲಿ ದಂಡ ವಸೂಲಿಗಿಳಿದ ಮಹಾನಗರ ಪಾಲಿಕೆ

By

Published : Mar 25, 2021, 8:23 PM IST

ಬೆಳಗಾವಿ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕೋವಿಡ್ ಮಾರ್ಗಸೂಚಿ ಜಾರಿ ಮಾಡಲಾಗಿದ್ದು, ಮಾಸ್ಕ್ ಇಲ್ಲದೆ ಓಡಾಡುವವರ ಮೇಲೆ 100 ರೂ‌. ದಂಡ ವಿಧಿಸಲಾಗುತ್ತಿದೆ.

ಬೆಳಗಾವಿಯಲ್ಲಿ ದಂಡ ವಸೂಲಿಗಿಳಿದ ಮಹಾನಗರ ಪಾಲಿಕೆ ಸಿಬ್ಬಂದಿ

ನಗರದ ಚೆನ್ನಮ್ಮ ವೃತ್ತ, ಕಣಬರಗಿ, ಮಾರ್ಕೆಟ್ ಪ್ರದೇಶ ಸೇರಿದಂತೆ ಇತರೆಡೆ ಮಾಸ್ಕ್ ಹಾಕದೇ ಓಡಾಡುವವರಿಂದ ಮಹಾನಗರ ಪಾಲಿಕೆ ಸಿಬ್ಬಂದಿ ದಂಡ ವಸೂಲಿಗೆ ಮುಂದಾಗಿದ್ದಾರೆ. ಪರಿಣಾಮ ಮಹಾನಗರ ಪಾಲಿಕೆ ಸಿಬ್ಬಂದಿ ಜೊತೆಗೆ ಸಾರ್ವಜನಿಕರು ವಾಗ್ವಾದ ನಡೆಸುತ್ತಿದ್ದಾರೆ. ವ್ಯಾಕ್ಸಿನ್ ಬಂದಿದೆ ಅಲ್ವಾ? ಫೈನ್ ಯಾಕೆ ವಸೂಲಿ ಮಾಡ್ತಿದ್ದೀರಾ? ಅಂತಾ ಕಿರಿಕ್ ಮಾಡುತ್ತಿದ್ದಾರೆ. ಹೀಗೆ ರಸ್ತೆ ಮಧ್ಯೆ ಕಿರಿಕ್​ ಮಾಡಿದ ವಾಹನ ಸವಾರರಿಗೆ ಬುದ್ದಿ ಹೇಳುವ ಕೆಲಸವನ್ನು ಪಾಲಿಕೆ ಸಿಬ್ಬಂದಿ ಮಾಡುತ್ತಿರುವುದಲ್ಲದೇ, ವೈರಸ್ ತಡೆಗೆ ಎಲ್ಲರೂ ‌ಸಹಕರಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ದಂಡಕ್ಕೆ ಹೆದರಿ ಪೊಲೀಸರೇ ಎಸ್ಕೇಪ್:

ಇಲ್ಲಿನ ಮಹಾಂತೇಶ ನಗರದ ಸೇತುವೆ ಬಳಿ ಮಾಸ್ಕ್ ಧರಿಸದೆ ಜೀಪ್‌ನಲ್ಲಿ ತೆರಳುತ್ತಿದ್ದ ಪೊಲೀಸರನ್ನು ಮಹಾನಗರ ಪಾಲಿಕೆ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ದಂಡಕ್ಕೆ ಹೆದರಿರುವ ಸಿಬ್ಬಂದಿ ಜೀಪ್​ ನಿಲ್ಲಿಸದೆ ಪರಾರಿಯಾದರು.

ABOUT THE AUTHOR

...view details