ಕರ್ನಾಟಕ

karnataka

ETV Bharat / state

ತಂಪು ಪಾನೀಯ ಬಾಟಲಿಯಲ್ಲಿ ಜಿರಲೆ ರೀತಿಯ ಹುಳುಗಳು ಪತ್ತೆ! - undefined

ಬಿಸಿಲಿನ ಹೊಡೆತದಿಂದ ರಿಲ್ಯಾಕ್ಸ್​ ಆಗಲು ಮಹಿಳೆಯೊಬ್ಬರು ಖರೀದಿಸಿದ್ದ ತಂಪು ಪಾನೀಯ ಬಾಟೆಲ್​ನಲ್ಲಿ ಜಿರಲೆ ರೀತಿಯ ಹುಳುಗಳು ಪತ್ತೆಯಾಗಿವೆ.

ತಂಪುಪಾನಿಯ ಬಾಟಲಿಯಲ್ಲಿ ಜಿರಲೆ ರೀತಿಯ ಹುಳುಗಳು ಪತ್ತೆ!

By

Published : May 3, 2019, 7:34 AM IST

ಬೆಳಗಾವಿ: ಬಿಸಿಲಿನ ಹೊಡೆತಕ್ಕೆ ರಿಲ್ಯಾಕ್ಸ್ ಆಗಲು ಖರೀದಿಸಿದ್ದ ತಂಪು ಪಾನೀಯ ಬಾಟಲಿಯಲ್ಲಿ ಜಿರಲೆ ರೀತಿಯ ಹುಳು ಕಂಡು ಗ್ರಾಹಕರು ಕಂಗಾಲಾದ ಘಟನೆ ಕುಂದಾನಗರಿಯಲ್ಲಿ ನಡೆದಿದೆ.

ತಂಪು ಪಾನೀಯ ಬಾಟಲಿಯಲ್ಲಿ ಜಿರಲೆ ರೀತಿಯ ಹುಳುಗಳು ಪತ್ತೆ

ಬೆಳಗಾವಿ ತಾಲೂಕಿನ ಕುದುರೆಮನೆ ಗ್ರಾಮದ ನಿವಾಸಿ ಸವಿತಾ ಪಾಟೀಲ ಕುಟುಂಬ ಸದಸ್ಯರು ಜಿರಲೆ ಇದ್ದ ಬಾಟಲಿಯಲ್ಲಿನ ತಂಪು ಪಾನೀಯ ಸೇವೆಸಿದ್ದು, ಅದೃಷ್ಟವಶಾತ್ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ.

ನಗರದ ಪ್ರತಿಷ್ಠಿತ ಮಳಿಗೆಯೊಂದರಲ್ಲಿ ತಂಪು ಪಾನೀಯ ಖರೀದಿಸಿರುವ ಸವಿತಾ, ಮನೆಗೆ ಹೋಗಿ ಗ್ಲಾಸ್​ಗಳಲ್ಲಿ ಜ್ಯೂಸ್ ಹಾಕುತ್ತಿದ್ದಂತೆ ಜಿರಲೆ ಮಾದರಿಯ ಹುಳು ಇರುವುದು ಪತ್ತೆಯಾಗಿದೆ. ಇದಕ್ಕೂ ಮುನ್ನ ಸವಿತಾ ಪಾಟೀಲ ಅವರ ಪುತ್ರ ಅರ್ಧ ಗ್ಲಾಸ್ ತಂಪು ಪಾನೀಯ ಸೇವಿಸಿದ್ದು, ಕೆಟ್ಟ ವಾಸನೆ ಬರುತ್ತಿರುವುದಾಗಿ ಹೇಳಿದ್ದಾನೆ. ಆಗ ಬಾಟಲಿಯಲ್ಲಿ ಜಿರಲೆ ರೀತಿಯ ಹುಳುಗಳು ಕಂಡುಬಂದಿವೆ. ಈ ಸಂಬಂಧ ಮಳಿಗೆಯ ಮ್ಯಾನೇಜರ್​ಗೂ ಸವಿತಾ ದೂರು ಕೊಟ್ಟಿದ್ದಾರೆ.

For All Latest Updates

TAGGED:

ABOUT THE AUTHOR

...view details