ಕರ್ನಾಟಕ

karnataka

ETV Bharat / state

ಊಹೆ ಮಾಡಿರುವುದಕ್ಕಿಂತಲೂ ಹೆಚ್ಚಿನ ಹಾನಿ.. ಶೀಘ್ರವೇ ಪರಿಹಾರ ಘೋಷಣೆ: ಸಚಿವೆ ಸೀತಾರಾಮನ್​ - ಕರ್ನಾಟಕದಲ್ಲಿ ನೆರೆಹಾವಳಿ

ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಬಾಗಲಕೋಟ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಇದರ ವೀಕ್ಷಣೆ ಮಾಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​, ಊಹೆ ಮಾಡಿರುವುದಕ್ಕಿಂತಲೂ ಹೆಚ್ಚಿನ ಹಾನಿ ಆಗಿದ್ದು, ಶೀಘ್ರವೇ ಪರಿಹಾರ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.

ನಿರ್ಮಲಾ ಸೀತಾರಾಮನ್​​/nirmala sitharaman

By

Published : Aug 10, 2019, 6:15 PM IST

Updated : Aug 10, 2019, 6:20 PM IST

ಬೆಳಗಾವಿ:ಬಾಗಲಕೋಟ, ಬೆಳಗಾವಿಯ ವಿವಿಧ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಊಹೆ ಮಾಡಿರುವುದಕ್ಕಿಂತಲೂ ಹೆಚ್ಚಿನ ಹಾನಿಯಾಗಿದ್ದು, ಕೃಷ್ಣೆ, ಮಲಪ್ರಭೆ ಉಕ್ಕಿ ಹರಿಯುತ್ತಿರುವ ಕಾರಣ ಅನೇಕ ಗ್ರಾಮಗಳು ಮುಳುಗಡೆಯಾಗಿವೆ. ರಸ್ತೆ ಸಂಪರ್ಕ ಸಂಪೂರ್ಣವಾಗಿ ಹಾಳಾಗಿದ್ದು, ಬೆಳಗಾವಿ, ಬಾಗಲಕೋಟದಲ್ಲಿ ಹೆಚ್ಚಿನ ಹಾನಿಯಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದು, ಅವರಿಗೆ ಎನ್​ಡಿಆರ್​ಎಫ್​​ ಉತ್ತಮ ಸಾಥ್​ ನೀಡುತ್ತಿದ್ದಾರೆ. ಈಗಾಗಲೇ ಆಯಾ ಜಿಲ್ಲೆಯ ಗ್ರಾಮಗಳ ನೆರೆಹಾವಳಿ ಮಾಹಿತಿ ನಮಗೆ ನೀಡಿದ್ದು, ನಾವು ಕೇಂದ್ರದೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನಿರ್ಮಲಾ ಸೀತಾರಾಮನ್​​/nirmala sitharaman
ಇದೇ ವೇಳೆ, ಫಸಲು ಭೀಮಾ ಯೋಜನೆ ಪ್ರೀಮಿಯಂ ಹಣ ದಿನಾಂಕ ವಿಸ್ತರಣೆ ಮಾಡಿ ಘೋಷಣೆ ಮಾಡಿರುವ ನಿರ್ಮಲಾ ಸೀತಾರಾಮನ್​​, ಬೆಳೆ ವಿಮೆ ಕಂಪನಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದು, ತಕ್ಷಣವೇ ಬೆಳೆ ಪರಿಹಾರ ನೀಡುವುದಾಗಿ ಮನವಿ ಮಾಡಿದ್ದಾರೆ.

ಬಹಳಷ್ಟು ಮನೆಗಳು ನೀರಿನಲ್ಲಿ ಮುಳುಗಿದ್ದು, ಸಣ್ಣ ಉದ್ಯಮಿಗಳು ನಷ್ಟ ಅನುಭವಿಸಿದ್ದಾರೆ. ಸಂತ್ರಸ್ತರ ನೆರವಿಗೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂದಿರುವ ಸಚಿವೆ, ಪ್ರವಾಹ ಪೀಡಿತ ಜನರ ಸಾಲ ವಸೂಲಿಗೆ ರಿಯಾಯಿತಿ ನೀಡಲಾಗುವುದು ಹಾಗೂ ನೇಕಾರರ ಸಾಲ ವಸೂಲಿಗೆ ಬಲವಂತ ಮಾಡುವಂತಿಲ್ಲ ಸಚಿವೆ ಇದೇ ವೇಳೆ ಸ್ಪಷ್ಟನೆ ನೀಡಿದ್ದಾರೆ.

Last Updated : Aug 10, 2019, 6:20 PM IST

ABOUT THE AUTHOR

...view details