ಕರ್ನಾಟಕ

karnataka

ETV Bharat / state

ಕತ್ತಿಗೆ ಟಿಕೆಟ್​ ನೀಡುವಂತೆ ಒತ್ತಾಯಿಸಿ ಕೈ ಕುಯ್ದುಕೊಂಡ ಅಭಿಮಾನಿ! ​ - ramesh fan

ರಮೇಶ್​ ಕತ್ತಿಗೆ ಟಿಕೆಟ್​ ನೀಡಬೇಕೆಂದು ಒತ್ತಾಯಿಸಿ ಅಭಿಮಾನಿಯೊಬ್ಬ ಕೈ ಕುಯ್ದುಕೊಂಡಿರುವ ಘಟನೆ ನಡೆದಿದೆ.

ಕೈ ಮೇಲೆ ಬ್ಲೇಡ್ ನಿಂದ ಕೊಯ್ದುಕೊಂಡು ಟಿಕೆಟ್ ಗಾಗಿ ಬೇಡಿಕೆ

By

Published : Mar 25, 2019, 8:41 AM IST

ಚಿಕ್ಕೋಡಿ:ಚಿಕ್ಕೋಡಿ ಲೋಕಸಭಾ ಚುನಾವಣೆ ಟಿಕೆಟ್​ಗಾಗಿ ಬಿಜೆಪಿಯಲ್ಲಿ ಪೈಪೋಟಿ ನಡೆದಿದೆ. ಟಿಕೆಟ್​ ಆಕಾಂಕ್ಷಿ ಆಗಿರುವ ರಮೇಶ್​ ಕತ್ತಿ ಬೆಂಬಲಿಸಿ ಅಭಿಮಾನಿವೋರ್ವ ಬ್ಲೇಡ್​ನಿಂದ ಕುಯ್ದುಕೊಂಡು ಟಿಕೆಟ್​ಗಾಗಿ ಬೇಡಿಕೆ ಇಟ್ಟಿದ್ದಾನೆ.

ಕೈ ಮೇಲೆ ಬ್ಲೇಡ್ ನಿಂದ ಕೊಯ್ದುಕೊಂಡು ಟಿಕೆಟ್ ಗಾಗಿ ಬೇಡಿಕೆ

ಮಾಜಿ ಸಂಸದ ರಮೇಶ್​ ಕತ್ತಿ, ನಿಪ್ಪಾಣಿ ಶಾಸಕಿ ಜೊಲ್ಲೆ ಪತಿ ಅಣ್ಣಾಸಾಹೇಬ ಜೊಲ್ಲೆ ನಡುವೆ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಅಭಿಮಾನಿವೋರ್ವ ರಮೇಶ್​ ಕತ್ತಿ ಸಾಹುಕಾರ್​​ಗೆ ಟಿಕೆಟ್ ನೀಡಬೇಕೆಂದು ಕೈ ಕುಯ್ದುಕೊಂಡಿದ್ದಾನೆ.

ಹುಕ್ಕೇರಿ ತಾಲೂಕು ಹರಗಾಪುರ ಗ್ರಾಮದ ಪವನ್​ ಪಾಟೀಲ್​ ಎಂಬಾತ ಕೈ ಕುಯ್ದುಕೊಂಡಿರುವ ಯುವಕ. ರಮೇಶ್​ ಕತ್ತಿಗೆ ಟಿಕೆಟ್ ಕೊಡುವಂತೆ ಕೈ ಮೇಲೆ KATTI SAVAKAR ಎಂದು ಬ್ಲೇಡ್​ನಿಂದ ಕುಯ್ದುಕೊಂಡಿದ್ದಾನೆ. ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details