ಅಥಣಿ (ಬೆಳಗಾವಿ): ರಾಜ್ಯ ಸಾರಿಗೆ ನೌಕರರು ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರು ಕ್ಷೇತ್ರವಾದ ಅಥಣಿಯಲ್ಲಿ ಬಸ್ ಸಂಚಾರ ಇಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ.
ಪ್ರತಿಭಟನೆಯಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದ್ದು, ಇದಕ್ಕಾಗಿ ಅಥಣಿ ಕೆಎಸ್ಆರ್ಟಿಸಿ ಘಟಕದಿಂದ 7 ಬಸ್ಗಳು ಸಂಚಾರ ಪ್ರಾರಂಭಿಸಿವೆ.
ಸಾರಿಗೆ ಸಚಿವ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಬೆರಳೆಣಿಕೆ ಬಸ್ಗಳು ಕಾರ್ಯಾರಂಭ ಇದಲ್ಲದೇ ಕಳೆದ ಎರಡು ದಿನದಲ್ಲಿ ಚಿಕ್ಕೋಡಿಯ ಸಾರಿಗೆ ವಿಭಾಗದ 600 ಬಸ್ಗಳ ಪೈಕಿ ಕೇವಲ 15 ಬಸ್ಗಳು ಮಾತ್ರ ಸಂಚಾರ ಪ್ರಾರಂಭಿಸಿವೆ. ಜೊತೆಗೆ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಪಕ್ಕದ ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರು ಕಾಗವಾಡ ತೆರಳುವ ಬಸ್ ಇಲ್ಲದೇ ಸಂಕಷ್ಟ ಎದುರಿಸಬೇಕಾಯಿತು.
ಇದನ್ನೂ ಓದಿ:ಸ್ವತಂತ್ರ ಭಾರತದಲ್ಲಿ ಮೋದಿಯಷ್ಟು ಸುಳ್ಳು ಯಾರೂ ಹೇಳಿಲ್ಲ: ಸಿದ್ದರಾಮಯ್ಯ ಗುಡುಗು