ಚಿಕ್ಕೋಡಿ: ಕುಸಿಯುವ ಭೀತಿಯಲ್ಲಿರುವ ಕಲ್ಲೋಳ- ಯಡೂರ ಸೇತುವೆ; ಕಾಮಗಾರಿಗೆ ಸಾರ್ವಜನಿಕರ ಒತ್ತಾಯ...
ಕಳೆದ ತಿಂಗಳು ಅತಿಯಾದ ಪ್ರವಾಹ ಉಂಟಾಗಿ ಚಿಕ್ಕೋಡಿ ಉಪವಿಭಾಗದ ಒಂಬತ್ತು ಸೇತುವೆಗಳು ಜಲಾವೃತಗೊಂಡ ಪೈಕಿ ಕಲ್ಲೋಳ - ಯಡೂರ ಸೇತುವೆ ಕೂಡಾ ಜಲಾವೃತಗೊಂಡಿತ್ತು.
ಚಿಕ್ಕೋಡಿ: 40 ವರ್ಷಗಳ ಹಿಂದೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತಾಲೂಕಿನ ಕಲ್ಲೋಳ ಯಡೂರ ಸೇತುವೆ ಕುಸಿಯುವ ಭೀತಿಯಲ್ಲಿದೆ.
ಕಳೆದ ತಿಂಗಳು ಅತಿಯಾದ ಪ್ರವಾಹ ಉಂಟಾಗಿ ಚಿಕ್ಕೋಡಿ ಉಪವಿಭಾಗದ ಒಂಬತ್ತು ಸೇತುವೆಗಳು ಜಲಾವೃತಗೊಂಡ ಪೈಕಿ ಕಲ್ಲೋಳ - ಯಡೂರ ಸೇತುವೆ ಕೂಡಾ ಜಲಾವೃತಗೊಂಡಿತ್ತು. ಪ್ರವಾಹದ ರಭಸಕ್ಕೆ ಬ್ಯಾರೇಜ್ನ ಪಿಲ್ಲರ್ ಒಂದು ಕೃಷ್ಣಾ ನದಿ ನೀರಿನಲ್ಲಿ ಕೊಚ್ಚಿಹೋಗಿದ್ದರಿಂದ ಸ್ಥಳೀಯರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ಬಂದ್ ಮಾಡಲಾಗಿದೆ. ಆದರೆ, ಇದನ್ನು ಪರಿಗಣಿಸದ ಸಾರ್ವಜನಿಕರು ಮಾತ್ರ ಈ ಬ್ಯಾರೇಜ್ ಮೇಲೆ ಬೈಕ್ ತೆಗೆದುಕೊಂಡು ಸಂಚರಿಸುತ್ತಿದ್ದಾರೆ.