ಚಿಕ್ಕೋಡಿ: ಹೃದಯಾಘಾತದಿಂದ ಹೆಂಡತಿ ಸಾವನ್ನಪ್ಪಿದ್ದು, ಮನನೊಂದು ಪತಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ. ವಾರದ ಹಿಂದೆ ಚೆನ್ನವ್ವ ರಂಗಾಪುರೆ (40) ಸಾವನ್ನಪ್ಪಿದ್ದರು. ಚೆನ್ನವ್ವಳ ಅಗಲಿಕೆಯಿಂದ ಮನನೊಂದ ಪತಿ ಕಾಡಪ್ಪ ಹಾಗೂ ಇಬ್ಬರು ಹೆಣ್ಣುಮಕ್ಕಳು ಇದೀಗ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿ ಸಾವಿನಿಂದ ಮನನೊಂದು ಪತಿ, ಇಬ್ಬರು ಮಕ್ಕಳು ಆತ್ಮಹತ್ಯೆ! - ಚಿಕ್ಕೋಡಿ ಆತ್ಮಹತ್ಯೆ ಪ್ರಕರಣ
ವಾರದ ಹಿಂದೆ ಚೆನ್ನವ್ವ ರಂಗಾಪುರೆ (40) ಸಾವನ್ನಪ್ಪಿದ್ದರು. ಇದೀಗ ಮನನೊಂದು ಪತಿ ಕಾಡಪ್ಪ ರಂಗಾಪುರೆ, ಪುತ್ರಿ ಕೀರ್ತಿ ರಂಗಾಪುರೆ ಹಾಗೂ ಸ್ಫೂರ್ತಿ ರಂಗಾಪುರೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಚಿಕ್ಕೋಡಿ ಆತ್ಮಹತ್ಯೆ ಪ್ರಕರಣ
ಪತಿ ಕಾಡಪ್ಪ ರಂಗಾಪುರೆ(47) ಕೀರ್ತಿ ರಂಗಾಪುರೆ(20) ಹಾಗೂ ಸ್ಫೂರ್ತಿ ರಂಗಾಪುರೆ(18) ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ಪೊಗತ್ಯಾನಟ್ಟಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಮೈಸೂರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ ಸಾವು
Last Updated : Jun 20, 2021, 1:42 PM IST