ಕರ್ನಾಟಕ

karnataka

ETV Bharat / state

ವಿಶ್ವಶಾಂತಿಗಾಗಿ ಉಪವಾಸ ವ್ರತ: ಇದು ಜೈನ ಧರ್ಮದ ದಶಲಕ್ಷಣ ನೋಪಿ ಆಚರಣೆ - ನಿರಾಹಾರ ಉಪವಾಸ ವ್ರತ

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ದಶಲಕ್ಷಣ ನೋಪಿ ಕಾರ್ಯಕ್ರಮವನ್ನು ಆಚರಿಸಿದರು. ಇಲ್ಲಿ ವಿಶ್ವಶಾಂತಿ ಮತ್ತು ಧರ್ಮ ಸಂಸ್ಕಾರಕ್ಕಾಗಿ ಕೈಗೊಂಡಿರುವ ಉಪವಾಸ ವ್ರತವನ್ನು ದಶಲಕ್ಷಣ ಪರ್ವದ ನಿಮಿತ್ತ ಅಹಿಂಸಾ ತತ್ವ, ಧರ್ಮ ಸಂಸ್ಕಾರ, ಆಹಾರ, ನೀರು ತ್ಯಾಗ ಮಾಡಿ ನಿರಾಹಾರ ಉಪವಾಸ ವ್ರತ ಆಚರಿಸುವುದು ವಿಶೇಷ.

ವಿಶ್ವಶಾಂತಿ ಮತ್ತು ಧರ್ಮ ಸಂಸ್ಕಾರಕ್ಕಾಗಿ ಉಪವಾಸ ವ್ರತ

By

Published : Sep 17, 2019, 9:03 PM IST

ಚಿಕ್ಕೋಡಿ:ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ದಶಲಕ್ಷಣ ನೋಪಿ ಕಾರ್ಯಕ್ರಮವನ್ನು ಆಚರಿಸಿದರು. ಇಲ್ಲಿ ವಿಶ್ವಶಾಂತಿ ಮತ್ತು ಧರ್ಮ ಸಂಸ್ಕಾರಕ್ಕಾಗಿ ಕೈಗೊಂಡಿರುವ ಉಪವಾಸ ವ್ರತವನ್ನು ದಶಲಕ್ಷಣ ಪರ್ವದ ನಿಮಿತ್ತ ಅಹಿಂಸಾ ತತ್ವ, ಧರ್ಮ ಸಂಸ್ಕಾರ, ಆಹಾರ, ನೀರು ತ್ಯಾಗ ಮಾಡಿ ನಿರಾಹಾರ ಉಪವಾಸ ವ್ರತ ಆಚರಿಸುವುದು ವಿಶೇಷ.

ವಿಶ್ವಶಾಂತಿ ಮತ್ತು ಧರ್ಮ ಸಂಸ್ಕಾರಕ್ಕಾಗಿ ಉಪವಾಸ ವ್ರತ
10 ದಿನಗಳ ಕಾಲ ಆಚರಣೆಯಲ್ಲಿರುವ ಈ ಸಂದರ್ಭದಲ್ಲಿ ಆತ್ಮಶುದ್ಧಿ ಮಾಡಿಕೊಳ್ಳುವ ಮಹಾಪರ್ವವಾಗಿದ್ದು, ಯಾವುದೇ ಆಡಂಬರಕ್ಕೆ ಅವಕಾಶವಿಲ್ಲದಂತೆ ಆಚರಣೆ ಮಾಡುವಂತಹದ್ದು. ಭಗವಂತನ ಸನ್ನಿಧಿಯಲ್ಲಿ ಕ್ಷಮೆ ಕೇಳುವ ಕ್ಷಮಾಧರ್ಮದ ಧಾರಣೆಯನ್ನೇ ಪ್ರಮುಖವಾಗಿಟ್ಟುಕೊಂಡು ಮುನಿಗಳನ್ನು ಮೊದಲುಗೊಂಡು ಶ್ರಾವಕರು ಜನ್ಮಾಂತರದ ಪಾಪ, ತಪ್ಪು ತಿಳಿವಳಿಕೆಗಳಿಗೆ ಕ್ಷಮೆ ಕೇಳುವುದು ಈ ಆಚರಣೆಯ ಮತ್ತೊಂದು ಪ್ರಮುಖ ಘಟ್ಟವಾಗಿದೆ.ಈ ರೂಡಿಯನ್ನು ದಶಲಕ್ಷ ಪರ್ವ, ನೋಪಿ ಎಂದು ವಿಶಿಷ್ಟ ರೀತಿಯಲ್ಲಿ ಜೈನ ಸಮುದಾಯದವರು ಆಚರಿಸುವುದು ವಾಡಿಕೆ. 10 ದಿನಗಳ ನಂತರ ಅತ್ಯಂತ ವಿಜೃಂಭಣೆಯಿಂದ ಮೆರವಣಿಗೆಯ ಮೂಲಕ ಕುಂಭ ಮೇಳದೊಂದಿಗೆ ಭಗವಾನ್ ಮಹಾವೀರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ಮೆರವಣಿಗೆ ಮಾಡಿ‌ ತಮ್ಮ ಬಸದಿಗೆ ತಂದು ಭಗವಾನನಿಗೆ ಪೂಜಿಸಿ 10 ದಿನದ ನೋಪಿ ಕಾರ್ಯಕ್ರಮ ನಿಮಜ್ಜನ ಮಾಡುವುದು ವಿಶೇಷ.

ABOUT THE AUTHOR

...view details