ಚಿಕ್ಕೋಡಿ: ಮೂರನಾಲ್ಕು ತಿಂಗಳಿಂದ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದರಿಂದ ಕಬ್ಬು ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಅತಿ ಹೆಚ್ಚು ಕಬ್ಬು ಬೆಳೆಯುವ ಬೆಳಗಾವಿ ಜಿಲ್ಲೆಯ ರೈತರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಪ್ರತಿ ವರ್ಷ ಸುಮಾರು 40 ಸಾವಿರ ಹೆಕ್ಟೇರ್ಗಿಂತ ಹೆಚ್ವು ಕಬ್ಬನ್ನು ಬೆಳಯಲಾಗುತ್ತದೆ.
ಇಲ್ಲಿನ ರೈತರು ನದಿ ನೀರನ್ನು ಅವಲಂಬಿಸಿದ್ದು, ಸುಮಾರು ಶೇ. 75ರಷ್ಟು ಕಬ್ಬು ಒಣಗಿ ನಿಂತಿದೆ.ನದಿ ದಡದ ಮೇಲಿನ ಗ್ರಾಮಗಳಲ್ಲಿ ಅಷ್ಟೇ ಅಲ್ಲದೇ ಏತ ನೀರಾವರಿ ಯೋಜನೆ ಮೂಲಕ ರೈತರು ಸ್ವಯಂ ಪೈಪ್ ಲೈನ್ ಮೂಲಕ ಸುಮಾರು 50 ಕಿ.ಮೀ.ಗಿಂತ ದೂರದಲ್ಲಿ ಪೈಪ್ ಲೈನ್ ಮಾಡಿ, ಅನೇಕರು ಸಾಲ ಮಾಡಿ ಕಬ್ಬು ಬೆಳೆದಿದ್ದಾರೆ ಎನ್ನಲಾಗುತ್ತಿದೆ.
ಆದರೆ, ಸಾಲ ಹೇಗೆ ತೀರಿಸುವುದು ಹಾಗೂ ಜೀವನ ಹೇಗೆ ಸಾಗಿಸುವುದು ಎಂಬ ಪ್ರಶ್ನೆ ರೈತರಿಗೆ ಎದುರಾಗಿದೆ. ಕಳೆದ ಬಾರಿ ಸಾಗಿಸಿದ ಕಬ್ಬಿಗೆ ಕಾರ್ಖಾನೆಗಳು ಬಾಕಿ ಬಿಲ್ ಉಳಿಸಿಕೊಂಡಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.