ಚಿಕ್ಕೋಡಿ:ಎರಡ್ಮೂರು ತಿಂಗಳಿನಿಂದ ಬೆಳೆಗಳಿಗೆ ಹಾಕಲು ಯೂರಿಯಾ ಸಿಗುತ್ತಿಲ್ಲ. ಗೊಬ್ಬರದ ಅಂಗಡಿಗಳಲ್ಲಿ ಯೂರಿಯಾ ಕೇಳಿದರೆ ಇಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ರಾಯಬಾಗ ತಾಲೂಕಿನ ವಿವಿಧ ಗ್ರಾಮದ ರೈತರು, ಕೃಷಿ ಇಲಾಖೆ ಅಧಿಕಾರಿಗಳ ಕಚೇರಿಗೆ ಆಗಮಿಸಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.
ಒಂದು ಯೂರಿಯಾ ಗೊಬ್ಬರ ಚೀಲಕ್ಕೆ 260 ರಿಂದ 270 ರವರೆಗೆ ದರವಿದೆ. ಆದರೆ ಗೊಬ್ಬರ ಅಂಗಡಿ ಮಾಲೀಕರು 300 ರಿಂದ 400 ರವರೆಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಎರಡು ಚೀಲ ಯೂರಿಯಾ ಗೊಬ್ಬರ ಬೇಕಾದರೆ ಕಡ್ಡಾಯವಾಗಿ ಯೂರಿಯಾ ಚೀಲದ ಜೊತೆಗೆ ಲಿಂಕ ಚೀಲಗಳನ್ನು ಖರೀದಿ ಮಾಡಬೇಕು. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ, ಏನೂ ಪ್ರಯೋಜನವಾಗಿಲ್ಲ ಎಂದು ರಾಯಬಾಗ ತಾಲೂಕಿನ ರೈತರು ಆಕ್ರೋಶ ವ್ಯಕ್ತಪಡಿಸಿದರು.