ಕರ್ನಾಟಕ

karnataka

ETV Bharat / state

ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಡೆಡ್​​​ಲೈನ್​​ ನೀಡಿದ  ರೈತ ಸಂಘ - ಹಸಿರು ಸೇನೆ

ಸೆಪ್ಟೆಂಬರ್ 10ರ ಒಳಗೆ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಎಚ್ಚರಿಕೆ ನೀಡಿದೆ.

ಸರ್ಕಾರಕ್ಕೆ ರೈತ ಸಂಘದಿಂದ ಡೆಡ್ ಲೈನ್

By

Published : Aug 29, 2019, 12:54 PM IST

ಬೆಳಗಾವಿ: ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ 15ಲಕ್ಷ, ಭಾಗಶಃ ಹಾನಿಯಾಗಿರುವ ಮನೆಗಳಿಗೆ 10 ಲಕ್ಷ, 1 ಎಕರೆ ಕಬ್ಬಿಗೆ 1.50 ಲಕ್ಷ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸೆ.10ರ ಒಳಗೆ ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಹಾವೇರಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರಕ್ಕೆ ರೈತ ಸಂಘದಿಂದ ಡೆಡ್ ಲೈನ್

ನಗರದ ಕನ್ನಡ ಸಾಹಿತ್ಯ ಭವನದಲ್ಲಿ 10 ಜಿಲ್ಲೆಗಳ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ತುಂಗಭದ್ರಾ ನದಿಗಳ‌ ಪ್ರವಾಹಕ್ಕೆತುತ್ತಾಗಿ ಲಕ್ಷಾಂತರ ಜನ ಬೀದಿಗೆ ಬಂದಿದ್ದಾರೆ. ಜನ, ಜಾನುವಾರು ಸಾವನ್ನಪ್ಪಿವೆ. ಕೋಟಿಗಟ್ಟಲೆ ಬೆಳೆ ಹಾನಿಯಾಗಿದೆ. ಬರಿ ವೈಮಾನಿಕ‌ ಸಮೀಕ್ಷೆ ಮಾಡಿದ್ದಾರೆ ಹೊರತು ಒಂದು ನಯಾ ಪೈಸೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಸರ್ಕಾರ ಪ್ರವಾಹದಿಂದ ಸಾವಿಗೀಡಾದ ವ್ಯಕ್ತಿಗಳ ಕುಟುಂಬಸ್ಥರಿಗೆ 15 ಲಕ್ಷ, ಹಾಳಾಗಿರುವ ತೋಟಗಾರಿಕಾ ಬೆಳೆಗಳಿಗೆ ಪ್ರತಿ ಎಕರೆಗೆ 2 ಲಕ್ಷ ಪರಿಹಾರ‌ ನೀಡಬೇಕು. ರೈತರ ಎಲ್ಲಾ ರೀತಿಯ ಸಾಲ ಮನ್ನಾ ಸೇರಿದಂತೆ ಫೈನಾನ್ಸ್ ಮತ್ತು ಮೈಕ್ರೊ ಫೈನಾನ್ಸ್​ ಸಾಲವನ್ನೂ ಮನ್ನಾ ಮಾಡಬೇಕು. ಸೆಪ್ಟೆಂಬರ್ 10ರ ಒಳಗೆ ಎಲ್ಲ ಈಡೇರಿಸಬೇಕು. ಇಲ್ಲದಿದ್ದರೆ ಎಲ್ಲ ಜಿಲ್ಲೆಗಳ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details