ಅಥಣಿ: ರೈತ ದಿನಾಚರಣೆ ಅಂಗವಾಗಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಸಿಬ್ಬಂದಿಯೊಂದಿಗೆ ಅಥಣಿ ಡಿವೈಎಸ್ಪಿ ಎಸ್.ವಿ.ಗಿರೀಶ್ ಸುಧಾರಿತ ಕಬ್ಬು ಕಟಾವು ವಾಹನ ಹಾಗೂ ಕಬ್ಬಿನ ಕಟಾವು ವೀಕ್ಷಿಸಿದ್ರು.
ರೈತ ದಿನಾಚರಣೆ ಪ್ರಯುಕ್ತ ಹೊಲಗಳಿಗೆ ಭೇಟಿ ನೀಡಿದ ಅಥಣಿ ಡಿವೈಎಸ್ಪಿ - Athani DYSP visited Farmers' Lands
ರೈತರ ದಿನಾಚರಣೆ ಅಂಗವಾಗಿ ತಾಲೂಕಿನ ಝುಂಜರವಾಡ ಗ್ರಾಮಕ್ಕೆ ಅಥಣಿ ಡಿವೈಎಸ್ಪಿ ಎಸ್.ವಿ. ಗಿರೀಶ್ ಭೇಟಿ ನೀಡಿದರು.
ರೈತರ ಜಮೀನುಗಳಿಗೆ ಭೇಟಿ ನೀಡಿದ ಅಥಣಿ ಡಿವೈಎಸ್ಪಿ
ಡಿವೈಎಸ್ಪಿ. ಎಸ್.ವಿ. ಗಿರೀಶ್ ಅವರಿಗೆ ಸಿಪಿಐ ಶಂಕರಗೌಡ ಬನಗೌಡ ಹಾಗೂ ಕಾಗವಾಡ ಪಿಎಸ್ಐ ಹನುಮಂತ ಶಿರಹಟ್ಟಿ ಹಾಗೂ ಸಿಬ್ಬಂದಿ ವರ್ಗ ಸಾಥ್ ನೀಡಿದರು. ಈ ವೇಳೆ ಪೊಲೀಸ್ ಅಧಿಕಾರಿ ರೈತರ ಕಷ್ಟಸುಖ ಆಲಿಸಿದರು. ಬಳಿಕ ಕಬ್ಬು ತಿನ್ನುತ್ತಾ ಸ್ವಲ್ಪ ಸಮಯ ರೈತರ ಜೊತೆ ಕಾಲ ಕಳೆದರು.
ರೈತರ ಜೊತೆ ಮಾತನಾಡುತ್ತ ಸಿಪಿಐ ಶಂಕರಗೌಡ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ರೈತರು ಕೃಷಿಗೆ ಸಂಬಂಧಿ ಮಾಹಿತಿ ಗಿರೀಶ್ ಅವರು ನೀಡಿದ ಸಲಹೆಗಳಿಗೆ ಕಿವಿಯಾದ್ರು.